ADVERTISEMENT

2023ರಲ್ಲಿ ಮೂರನೇ ಒಂದರಷ್ಟು ಜಾಗತಿಕ ಆರ್ಥಿಕತೆ ಹಿಂಜರಿತ: ಐಎಂಎಫ್‌ ಎಚ್ಚರಿಕೆ

ಚೀನಾ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟಕ್ಕೆ ಆರ್ಥಿಕ ಹಿಂಜರಿತದ ಭೀತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2023, 8:16 IST
Last Updated 2 ಜನವರಿ 2023, 8:16 IST
ಕ್ರಿಸ್ಟಲಿನಾ ಜಾರ್ಜೀವ
ಕ್ರಿಸ್ಟಲಿನಾ ಜಾರ್ಜೀವ   

ನವದೆಹಲಿ: ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆ 2023ರಲ್ಲಿ ಹಿಂಜರಿತ ಅನುಭವಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಮ್‌ಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ, ಐರೋಪ್ಯ ಒಕ್ಕೂಟ ಹಾಗೂ ಚೀನಾದಲ್ಲಿ ಅರ್ಥಿಕತೆ ಮಂದಗತಿಯಲ್ಲಿ ಸಾಗಲಿದ್ದು, 2023ರ ಕಠಿಣ ವರ್ಷವಾಗಲಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾ–ಉಕ್ರೇನ್‌ ಯುದ್ಧ, ಬೆಲೆ ಏರಿಕೆ, ಬಡ್ಡಿದರ ಹೆಚ್ಚಳ ಹಾಗೂ ಕೋವಿಡ್‌ ಪ್ರಕರಣಗಳ ಏರಿಕೆ ಮುಂತಾದವುಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ನುಡಿದಿದ್ದಾರೆ.

ADVERTISEMENT

‘ಪ್ರಪಂಚದ ಮೂರನೇ ಒಂದರಷ್ಟು ಆರ್ಥಿಕತೆಗಳು 2023ರಲ್ಲಿ ಹಿಂಜರಿತಕ್ಕೆ ಒಳಗಾಗಲಿವೆ. ಆರ್ಥಿಕ ಹಿಂಜರಿತದ ಭಯ ಇಲ್ಲದ ದೇಶಗಳೂ ಕೂಡ, ಹಿಂಜರಿತದ ಪರಿಣಾಮ ಎದುರಿಸಲಿದೆ‘ ಎಂದು ಅವರು ಹೇಳಿದ್ದಾರೆ.

ಆರ್ಥಿಕ ಹಿಂಜರಿತದಿಂದ ತಪ್ಪಿಸಿಕೊಳ್ಳಳು ಐರೋಪ್ಯ ಒಕ್ಕೂಟಕ್ಕೆ ಅಸಾಧ್ಯ ಎಂದಿರುವ ಅವರು, ಅಮೆರಿಕ ಹಿಂಜರಿತದ ಅಂಚಿನಲ್ಲಿದೆ. ಚೀನಾಗೆ 2023 ತ್ರಾಸದಾಯಕವಾಗಿರಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

‘ಮುಂದಿನ ಎರಡು ತಿಂಗಳು ಚೀನಾಗೆ ಕಠಿಣವಾಗಿರಲಿದೆ. ಇದರಿಂದಾಗಿ ಚೀನಾದ ಬೆಳವಣಿಗೆ ಋಣಾತ್ಮಕವಾಗಿರಲಿದೆ. ಈ ಪ್ರದೇಶದ ಆರ್ಥಿಕತೆಗ ಹಾಗೂ ಜಾಗತಿಕ ಆರ್ಥಿಕತೆ ಮೇಲೂ ಋಣಾತ್ಮಕ ಪರಿಣಾಮ ಬೀರಲಿದೆ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.