ADVERTISEMENT

ಅಡುಗೆ ಎಣ್ಣೆ ದರ ಪ್ರತಿ ಕೆ.ಜಿಗೆ ₹3 ರಿಂದ ₹4ರವರೆಗೆ ಇಳಿಕೆ ಸಾಧ್ಯತೆ: ಎಸ್‌ಇಎ

ಪಿಟಿಐ
Published 11 ಡಿಸೆಂಬರ್ 2021, 16:15 IST
Last Updated 11 ಡಿಸೆಂಬರ್ 2021, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಡುಗೆ ಎಣ್ಣೆ ದರವು ಮುಂಬರುವ ತಿಂಗಳುಗಳಲ್ಲಿ ಪ್ರತಿ ಕೆ.ಜಿಗೆ ₹ 3 ರಿಂದ ₹ 4ರವರೆಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಹೇಳಿದೆ.

ಎಣ್ಣೆಕಾಳುಗಳ ದೇಶಿ ಉತ್ಪಾದನೆ ಗರಿಷ್ಠ ಮಟ್ಟದಲ್ಲಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರವು ಇಳಿಮುಖವಾಗಿದೆ. ಈ ಕಾರಣಗಳಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ದರವು ಇನ್ನಷ್ಟು ಇಳಿಕೆ ಆಗುವ ಅಂದಾಜು ಮಾಡಲಾಗಿದೆ ಎಂದು ಅದು ತಿಳಿಸಿದೆ.

ಕೇಂದ್ರ ಸರ್ಕಾರವು ಆಮದು ಸುಂಕ ತಗ್ಗಿಸಿರುವುದರಿಂದ ಅಡುಗೆ ಎಣ್ಣೆ ದರವು ಒಂದು ತಿಂಗಳಿನಲ್ಲಿ ಕೆ.ಜಿಗೆ ₹ 8 ರಿಂದ ₹ 10ರವರೆಗೆ ಇಳಿಕೆ ಆಗಿದೆ ಎಂದು ಮಾಹಿತಿ ನೀಡಿದೆ.

ADVERTISEMENT

ದೇಶದಲ್ಲಿ ಅಡುಗೆ ಎಣ್ಣೆಗಳ ವಾರ್ಷಿಕ ಬೇಡಿಕೆ 2.2 ಕೋಟಿ ಟನ್‌ಗಳಿಂದ 2.25 ಕೋಟಿ ಟನ್‌ಗಳಷ್ಟಿದೆ. ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಮೂಡಿಸಲು 1.3 ಕೋಟಿ ಟನ್‌ಗಳಿಂದ 1.5 ಕೋಟಿ ಟನ್‌ಗಳಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.