ADVERTISEMENT

ಟ್ವಿಟರ್ ಸ್ವಾಧೀನಕ್ಕೆ ₹ 54 ಸಾವಿರ ಕೋಟಿ ಸಂಗ್ರಹಿಸಿದ ಮಸ್ಕ್

ಏಜೆನ್ಸೀಸ್
Published 5 ಮೇ 2022, 16:07 IST
Last Updated 5 ಮೇ 2022, 16:07 IST
ಇಲಾನ್‌ ಮಸ್ಕ್ ಮತ್ತು ಟ್ವಿಟರ್
ಇಲಾನ್‌ ಮಸ್ಕ್ ಮತ್ತು ಟ್ವಿಟರ್   

ನ್ಯೂಯಾರ್ಕ್‌: ಟ್ವಿಟರ್ ಕಂಪನಿಯನ್ನು ಖರೀದಿಸಲು ಎಲಾನ್ ಮಸ್ಕ್‌ ಅವರು ₹ 54 ಸಾವಿರ ಕೋಟಿ ಸಂಗ್ರಹಿಸಿದ್ದಾರೆ. ಮಸ್ಕ್ ಅವರು ಟ್ವಿಟರ್ ಖರೀದಿಸಲು, ಅದರಲ್ಲಿ ಈಗಾಗಲೇ ಹೂಡಿಕೆ ಮಾಡಿರುವ ಒರ್‍ಯಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್, ಸೌದಿ ಅರೇಬಿಯಾದ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅವರಿಂದ ಷೇರುಗಳನ್ನು ಖರೀದಿಸಬೇಕಿದೆ.

ಷೇರುಗಳನ್ನು ಮಾರಾಟ ಮಾಡಲು ಸಿದ್ಧವಿರುವ 18 ಹೂಡಿಕೆದಾರರನ್ನು ಮಸ್ಕ್ ಅವರು ಹೆಸರಿಸಿದ್ದಾರೆ. ಎಲಿಸನ್, ಸಿಕೋಯಾ ಕ್ಯಾಪಿಟಲ್ ಹೆಸರು ಮಸ್ಕ್ ಸಿದ್ಧಪಡಿಸಿರುವ ಪಟ್ಟಿಯಲ್ಲಿವೆ.

ಅಲ್ವಲೀದ್ ಬಿನ್ ತಲಾಲ್ ಅವರು 3.5 ಕೋಟಿ ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಆದರೆ, ಒಂದಿಷ್ಟು ಷೇರುಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಿದ್ದಾರೆ. ಟ್ವಿಟರ್ ಸ್ವಾಧೀನ ಪ್ರಕ್ರಿಯೆಯು ಈ ವರ್ಷದಲ್ಲಿಯೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಸ್ವಾಧೀನ ಪೂರ್ಣಗೊಂಡ ನಂತರದಲ್ಲಿ ಮಸ್ಕ್ ಅವರು ಟ್ವಿಟರ್‌ನ ತಾತ್ಕಾಲಿಕ ಸಿಇಒ ಆಗಿ ಕೆಲಸ ಮಾಡುವ ಸಾಧ್ಯತೆ ಇದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.