ADVERTISEMENT

ಎಂಬಸಿ ಆರ್‌ಇಐಟಿ ತೆಕ್ಕೆಗೆ ಬೆಂಗಳೂರಿನ ಎಂಬಸಿ ಟೆಕ್‌ಪಾರ್ಕ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 13:39 IST
Last Updated 17 ನವೆಂಬರ್ 2020, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರಿನಲ್ಲಿ ಇರುವ ಅತಿದೊಡ್ಡ ಬಿಸಿನೆಸ್‌ ಪಾರ್ಕ್‌ ‘ಎಂಬಸಿ ಟೆಕ್‌ ವಿಲೇಜ್‌’ಅನ್ನು ₹ 9,782 ಕೋಟಿಗೆ ಖರೀದಿಸಲು ಎಂಬಸಿ ಆರ್‌ಇಐಟಿ ನಿರ್ಧರಿಸಿದೆ.

ಎಂಬಸಿ ಸಮೂಹ, ಬ್ಲ್ಯಾಕ್‌ಸ್ಟೋನ್‌ ಮತ್ತು ಇತರೆ ಹೂಡಿಕೆದಾರರಿಂದಬಿಸಿನೆಸ್‌ ಪಾರ್ಕ್‌ಅನ್ನು ಖರೀದಿಸಲು ಒಪ್ಪಿರುವುದಾಗಿ ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಎಂಬಸಿ ಆರ್‌ಇಐಟಿ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ದೇಶದ ಮೊದಲ ರಿಯಲ್‌ ಎಸ್ಟೇಟ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ (ಆರ್‌ಇಐಟಿ) ಆಗಿದ್ದು, ಬ್ಲ್ಯಾಕ್‌ಸ್ಟೋನ್‌ ಮತ್ತು ಎಂಬಸಿ ಸಮೂಹದ ಪ್ರಾಯೋಜಕತ್ವ ಪಡೆದುಕೊಂಡಿದೆ.

ADVERTISEMENT

ಪ್ರಸ್ತಾಪಿತ ಒಪ್ಪಂದಕ್ಕೆ ಷೇರುದಾರರು ಮತ್ತು ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ದೊರೆಯಬೇಕಿದೆ.

ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ 61 ಲಕ್ಷ ಚದರ ಅಡಿ, ನಿರ್ಮಾಣ ಹಂತದಲ್ಲಿರುವ 31 ಲಕ್ಷ ಚದರ ಅಡಿ ಹಾಗೂ ಹಿಲ್ಟನ್‌ ಹೋಟೆಲ್‌ ಈ ಖರೀದಿ ಒಪ್ಪಂದದಲ್ಲಿ ಸೇರಿಕೊಂಡಿದೆ.

ಈ ಖರೀದಿಯಿಂದಾಗಿ ಎಂಬಸಿ ಆರ್‌ಇಐಟಿಯ ಒಟ್ಟಾರೆ ವಾಣಿಜ್ಯ ಕಚೇರಿಯ ಸ್ಥಳಾವಕಾಶವು ಶೇಕಡ 28ರಷ್ಟು ಹೆಚ್ಚಾಗಲಿದ್ದು, 4.24 ಕೋಟಿ ಚದರ ಅಡಿಗಳಷ್ಟಾಗಲಿದೆ.

‘ಪ್ರಸ್ತಾವಿತ ಸ್ವಾಧೀನದಿಂದ ಹಾಲಿ ಇರುವ ನಮ್ಮ ಕಚೇರಿ ಸ್ಥಳಾವಕಾಶಕ್ಕೆ ಇನ್ನೊಂದು ವಿಶೇಷ ಸ್ವತ್ತು ಸೇರಿಕೊಳ್ಳಲಿದೆ’ ಎಂದು ಎಂಬಸಿ ಆರ್‌ಇಐಟಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮೈಕ್‌ ಹಾಲೆಂಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.