ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ತನ್ನ ಸದಸ್ಯರ ಖಾತೆಗಳಿಗೆ 2024–25ನೇ ಆರ್ಥಿಕ ವರ್ಷದ ಬಡ್ಡಿ ಪಾವತಿ ಮಾಡುವುದನ್ನು ಈ ವಾರದೊಳಗೆ ಪೂರ್ಣಗೊಳಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಮಂಗಳವಾರ ಹೇಳಿದ್ದಾರೆ.
2024–25ನೇ ಸಾಲಿಗೆ ಪಿ.ಎಫ್ ಮೊತ್ತಕ್ಕೆ ಶೇ 8.25ರಷ್ಟು ಬಡ್ಡಿ ದರ ನಿಗದಿ ಮಾಡಲಾಗಿದೆ.
33.56 ಕೋಟಿ ಸದಸ್ಯರ ಪೈಕಿ, ಜುಲೈ 8ರ ವೇಳೆಗೆ 32.39 ಕೋಟಿ (ಶೇ 96.51ರಷ್ಟು) ಸದಸ್ಯರಿಗೆ ಬಡ್ಡಿ ಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 2023–24ರಲ್ಲೂ ಬಡ್ಡಿ ದರ ಶೇ 8.25 ಆಗಿತ್ತು. 2022–23ರಲ್ಲಿ ಶೇ 8.15ರಷ್ಟಿತ್ತು.
ನಿಶ್ಚಿತ ಆದಾಯದ ಕೆಲವು ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಇಪಿಎಫ್‌ಒ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.