ADVERTISEMENT

ಹೂಡಿಕೆದಾರರ ಸಂಪತ್ತು ₹6 ಲಕ್ಷ ಕೋಟಿ ಇಳಿಕೆ

ಪಿಟಿಐ
Published 28 ಫೆಬ್ರುವರಿ 2024, 15:47 IST
Last Updated 28 ಫೆಬ್ರುವರಿ 2024, 15:47 IST
ಷೇರುಪೇಟೆ
ಷೇರುಪೇಟೆ   

ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿನ ಇಳಿಮುಖ ವಹಿವಾಟು ಸೇರಿದಂತೆ ರಿಲಯನ್ಸ್ ಇಂಡಸ್ಟ್ರೀಸ್‌, ಬ್ಯಾಂಕ್‌ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರು ಸೂಚ್ಯಂಕಗಳು ಬುಧವಾರ ಇಳಿಕೆ ದಾಖಲಿಸಿವೆ.

ಹೂಡಿಕೆದಾರರ ಸಂಪತ್ತು ಒಂದೇ ದಿನ ₹6 ಲಕ್ಷ ಕೋಟಿ ಕರಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ ಷೇರಿನ ಮೌಲ್ಯ ಶೇ 2ರಷ್ಟು ಕುಸಿದಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 790 ಅಂಶ ಕಡಿಮೆಯಾಗಿ 72,304ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 247 ಅಂಶ ಇಳಿಕೆ ಕಂಡು 21,951ರಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು.  

ADVERTISEMENT

ವೊಡಾಫೋನ್ ಐಡಿಯಾ ಷೇರು ಇಳಿಕೆ: 

ಹೂಡಿಕೆದಾರರಿಗೆ ಉತ್ತೇಜನ ನೀಡಲು ನಿಧಿ ಸಂಗ್ರಹಕ್ಕೆ ಆಡಳಿತ ಮಂಡಳಿಯು ಒಪ್ಪಿಗೆ ಕೊಟ್ಟಿರುವ ಬೆನ್ನಲ್ಲೇ ವೊಡಾಫೋನ್‌ ಐಡಿಯಾ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 14ರಷ್ಟು ಇಳಿಕೆ ಕಂಡಿದೆ.

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಮೌಲ್ಯ ಕ್ರಮವಾಗಿ ಶೇ 13.99 ಮತ್ತು ಶೇ 13.88ರಷ್ಟು ಕಡಿಮೆ ಆಗಿದೆ. ಕಂಪನಿಯ ಮಾರುಕಟ್ಟೆಯ ಮೌಲ್ಯ ಒಂದೇ ದಿನ ₹10,806 ಕೋಟಿ ಇಳಿಕೆಯಾಗಿದೆ.

ಪೇಟಿಎಂ ಷೇರಿನ ಮೌಲ್ಯವೂ ಶೇ 4.99ರಷ್ಟು ಇಳಿಕೆ ಆಗಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ₹406.20 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.