ADVERTISEMENT

ಚೇತರಿಕೆ ಕಂಡ ಸೆನ್ಸೆಕ್ಸ್‌

ಪಿಟಿಐ
Published 31 ಜನವರಿ 2024, 14:09 IST
Last Updated 31 ಜನವರಿ 2024, 14:09 IST
ಷೇರು ಮಾರುಕಟ್ಟೆ
ಷೇರು ಮಾರುಕಟ್ಟೆ   

ಮುಂಬೈ (ಪಿಟಿಐ): ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚಿನ ಉತ್ಸಾಹ ತೋರಿದ್ದರಿಂದ ಷೇರುಪೇಟೆಯಲ್ಲಿ ಬುಧವಾರ ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 612 ಅಂಶ ಏರಿಕೆಯಾಗಿ 71,752ರಲ್ಲಿ ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 203 ಅಂಶ ಹೆಚ್ಚಳವಾಗಿ, 21,725ಕ್ಕೆ ವಹಿವಾಟು ಅಂತ್ಯಗೊಂಡಿತು.

ಸನ್‌ಫಾರ್ಮಾ, ಟಾಟಾ ಮೋಟರ್ಸ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಮಾರುತಿ, ಬಜಾಜ್‌ ಫಿನ್‌ಸರ್ವ್‌, ಪವರ್‌ಗ್ರಿಡ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಗಳಿಕೆ ಕಂಡಿವೆ. ಲಾರ್ಸೆನ್‌ ಆ್ಯಂಡ್‌ ಟೊರ್ಬೊ ಮತ್ತು ಟೈಟನ್‌ ಇಳಿಕೆ ಕಂಡಿವೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.