ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಗೆ ಹಣದ ಹರಿವು ಜುಲೈ ತಿಂಗಳಲ್ಲಿ ಶೇಕಡ 81ರಷ್ಟು ಹೆಚ್ಚಳ ಕಂಡಿದೆ ಎಂದು ಭಾರತದ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಸೋಮವಾರ ಹೇಳಿದೆ.
ಫ್ಲೆಕ್ಸಿಕ್ಯಾಪ್ ಫಂಡ್‌ಗಳಿಗೆ ಹಾಗೂ ಥೀಮ್ಯಾಟಿಕ್ ಫಂಡ್‌ಗಳಿಗೆ ಹೆಚ್ಚು ಹಣ ಹರಿದುಬಂದಿದೆ. ಜುಲೈನಲ್ಲಿ ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್‌ಗಳಲ್ಲಿ ₹42,702 ಕೋಟಿ ತೊಡಗಿಸಲಾಗಿದೆ. ಇದು ಜೂನ್ ತಿಂಗಳಲ್ಲಿ ₹23,587 ಕೋಟಿ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.