ADVERTISEMENT

ರಫ್ತು ಉತ್ತೇಜನಾ ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ

ಪಿಟಿಐ
Published 13 ನವೆಂಬರ್ 2025, 0:21 IST
Last Updated 13 ನವೆಂಬರ್ 2025, 0:21 IST
ಕೇಂದ್ರ ಸಚಿವ ಸಂಪುಟ
ಕೇಂದ್ರ ಸಚಿವ ಸಂಪುಟ   

ನವದೆಹಲಿ: ಆರು ವರ್ಷಗಳ ಅವಧಿಯಲ್ಲಿ ಜಾರಿಗೆ ಬರುವ, ₹25 ಸಾವಿರ ಕೋಟಿ ಮೊತ್ತದ ರಫ್ತು ಉತ್ತೇಜನಾ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಯೋಜನೆಯು ಈ ಹಣಕಾಸು ವರ್ಷದಿಂದಲೇ ಜಾರಿಗೆ ಬರಲಿದೆ.

ಈ ಯೋಜನೆಯು, ಅಮೆರಿಕವು ಭಾರತದ ಸರಕುಗಳ ಮೇಲೆ ವಿಧಿಸಿರುವ ಭಾರಿ ಪ್ರಮಾಣದ ಸುಂಕದ ಪರಿಣಾಮವನ್ನು ನಿಭಾಯಿಸಲು ರಫ್ತುದಾರರಿಗೆ ನೆರವಾಗಲಿದೆ. ಎರಡು ಉಪ ಯೋಜನೆಗಳ ಮೂಲಕ (‘ನಿರ್ಯಾತ್ ಪ್ರೋತ್ಸಾಹನ್’ ಮತ್ತು ‘ನಿರ್ಯಾತ್ ದಿಶಾ’) ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 

ಈ ಯೋಜನೆಯು ರಫ್ತು ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲಲಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಸಭೆಯ ನಂತರ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.