ADVERTISEMENT

ಮಾರ್ಚ್‌ನಲ್ಲಿ ದೇಶದ ರಫ್ತು ವಹಿವಾಟು ಶೇ 20ರಷ್ಟು ಹೆಚ್ಚಳ

ಪಿಟಿಐ
Published 13 ಏಪ್ರಿಲ್ 2022, 15:42 IST
Last Updated 13 ಏಪ್ರಿಲ್ 2022, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ರಫ್ತು ವಹಿವಾಟು 2021ರ ಮಾರ್ಚ್‌ಗೆ ಹೋಲಿಸಿದರೆ 2022ರ ಮಾರ್ಚ್‌ನಲ್ಲಿ ಶೇಕಡ 19.76ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಮೌಲ್ಯದ ಲೆಕ್ಕದಲ್ಲಿ ₹ 2.67 ಲಕ್ಷ ಕೋಟಿಯಿಂದ ₹ 3.20 ಲಕ್ಷ ಕೋಟಿಗೆ ಏರಿಕೆ ಆಗಿದೆ. 2022ರ ಮಾರ್ಚ್‌ನಲ್ಲಿ ಆಮದು ವಹಿವಾಟು ₹ 4.61 ಲಕ್ಷ ಕೋಟಿಗೆ ತಲುಪಿದ್ದು, 2021ರ ಮಾರ್ಚ್‌ಗೆ ಹೋಲಿಸಿದರೆ ಶೇ 24.21ರಷ್ಟು ಏರಿಕೆಯಾಗಿದೆ.

ವ್ಯಾಪಾರ ಕೊರತೆ ಅಂತರವು 2021ರ ಮಾರ್ಚ್‌ನಲ್ಲಿ ₹ 1.03 ಲಕ್ಷ ಕೋಟಿ ಇದ್ದಿದ್ದು 2022ರ ಮಾರ್ಚ್‌ನಲ್ಲಿ ₹ 1.40 ಲಕ್ಷ ಕೋಟಿಗೆ ಏರಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.