ADVERTISEMENT

ತಗ್ಗಿದೆ ಭಾರತದ ಬಾಹ್ಯ ಸಾಲದ ಮೊತ್ತ

ಪಿಟಿಐ
Published 30 ಸೆಪ್ಟೆಂಬರ್ 2020, 18:20 IST
Last Updated 30 ಸೆಪ್ಟೆಂಬರ್ 2020, 18:20 IST
   

ಮುಂಬೈ: ಜೂನ್‌ ಅಂತ್ಯದ ವೇಳೆಗೆ ಭಾರತವು ಹೊರದೇಶಗಳಿಂದ ಪಡೆದ ಸಾಲದ ಒಟ್ಟು ಮೊತ್ತವು ₹ 40.7 ಲಕ್ಷ ಕೋಟಿ ಆಗಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ)‌ ಬುಧವಾರ ಹೇಳಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಹೋಲಿಸಿದರೆ ಸಾಲದ ಮೊತ್ತದಲ್ಲಿ ₹ 28 ಸಾವಿರ ಕೋಟಿಯಷ್ಟು ಕಡಿಮೆ ಆದಂತಾಗಿದೆ ಎಂದು ಅದು ತಿಳಿಸಿದೆ.

ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಮತ್ತು ಬಾಹ್ಯ ಸಾಲದ ನಡುವಣ ಅನುಪಾತವು ಜೂನ್‌ ಅಂತ್ಯಕ್ಕೆ ಶೇಕಡ 21.8ರಷ್ಟಕ್ಕೆ ಹೆಚ್ಚಳ ಕಂಡಿದೆ. ಇದು ಮಾರ್ಚ್‌ 31ರ ಹೊತ್ತಿಗೆ ಶೇ 20.6ರಷ್ಟು ಇತ್ತು.

ದೇಶದ ಚಾಲ್ತಿ ಖಾತೆ ಮಿಗತೆ ಪ್ರಮಾಣವು ಜೂನ್‌ ತ್ರೈಮಾಸಿಕದಲ್ಲಿ ಜಿಡಿಪಿಯ ಶೇಕಡ 3.9ಕ್ಕೆ ಹೆಚ್ಚಳ ಕಂಡಿದೆ.

ADVERTISEMENT

ಜೂನ್‌ ಅಂತ್ಯಕ್ಕೆ ದೇಶದ ಚಾಲ್ತಿ ಖಾತೆ ಮಿಗತೆ ಮೊತ್ತವು ₹ 1.45 ಲಕ್ಷ ಕೋಟಿ ಆಗಿತ್ತು. ಕೋವಿಡ್–19 ಕಾರಣದಿಂದಾಗಿ ಆಮದು ಪ್ರಮಾಣ ತಗ್ಗಿದ್ದರಿಂದ ಹೀಗಾಗಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.