ನವದೆಹಲಿ: ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಹೆದ್ದಾರಿ ಟೋಲ್ ಪಾಸ್ ವ್ಯವಸ್ಥೆ ಶುಕ್ರವಾರದಿಂದ ಜಾರಿಗೆ ಬರಲಿದೆ.
ಈ ವಾರ್ಷಿಕ ಪಾಸ್‌ನ ಮೌಲ್ಯ ₹3 ಸಾವಿರ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್ ವೇಗಳನ್ನು ಬಳಸುವ ವಾಣಿಜ್ಯೇತರ ವಾಹನಗಳು (ಖಾಸಗಿ ಕಾರು, ಜೀಪ್, ವ್ಯಾನ್‌ಗಳು) 200 ಟ್ರಿಪ್‌ಗಳವರೆಗೆ ಈ ಪಾಸ್ ಬಳಸಬಹುದು. ಅಷ್ಟು ಟ್ರಿಪ್ ಪೂರ್ಣಗೊಂಡ ನಂತರ ಪಾಸ್‌ಗಳನ್ನು ಮತ್ತೆ ರೀಚಾರ್ಜ್ ಮಾಡಿಕೊಳ್ಳಬಹುದು. ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಇರುವವರು ಹೊಸದಾಗಿ ಖರೀದಿಸುವ ಅಗತ್ಯ ಇಲ್ಲ.
ರಾಜ್‌ಮಾರ್ಗ್ ಯಾತ್ರ ಆ್ಯಪ್, ಎನ್‌ಎಚ್‌ಎಐ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಲಿಂಕ್ ಬಳಸಿ, ಪಾಸ್ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.