ADVERTISEMENT

2022–23ನೇ ಹಣಕಾಸು ವರ್ಷದಲ್ಲಿ ₹ 7.6 ಲಕ್ಷ ಕೋಟಿ ಎಫ್‌ಡಿಐ ನಿರೀಕ್ಷೆ

ಪಿಟಿಐ
Published 14 ಏಪ್ರಿಲ್ 2022, 19:30 IST
Last Updated 14 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತವು 2022–23ನೇ ಹಣಕಾಸು ವರ್ಷದಲ್ಲಿ ₹ 7.60 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಿಸುವ ನಿರೀಕ್ಷೆ ಇದೆ ಎಂದು ಉದ್ಯಮ ಸಂಘಟನೆಯಾದ ಪಿಎಚ್‌ಡಿಸಿಸಿಐ ಗುರುವಾರ ಹೇಳಿದೆ.

ಆರ್ಥಿಕ ಸುಧಾರಣೆ ಮತ್ತು ಸುಲಲಿತ ವಹಿವಾಟು ನಡೆಸಲು ಈಚಿನ ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಎಫ್‌ಡಿಐ ಹೆಚ್ಚಾಗುವ ನಿರೀಕ್ಷೆ ಮಾಡಿರುವುದಾಗಿ ಅದು ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ 8ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಮಾಡಿರುವುದಾಗಿಯೂ ಹೇಳಿದೆ.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆ ಆಗಿದೆ, ಸರಕುಗಳ ದರ ಹೆಚ್ಚಾಗಿದೆ. ಹೀಗಾಗಿ ಹಣದುಬ್ಬರವು ಏರುಮುಖವಾಗಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.