ADVERTISEMENT

ಹೈದರಾಬಾದ್‌ನಲ್ಲಿ ಡಿಜಿಟಲ್‌ ಹಬ್‌: ಫಿಯಟ್‌ನಿಂದ ₹1,103 ಕೋಟಿ ಹೂಡಿಕೆ

ಪಿಟಿಐ
Published 16 ಡಿಸೆಂಬರ್ 2020, 12:29 IST
Last Updated 16 ಡಿಸೆಂಬರ್ 2020, 12:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫಿಯಟ್‌ ಕ್ರಿಸ್ಲರ್‌ ಆಟೊಮೊಬೈಲ್ಸ್‌ (ಎಫ್‌ಸಿಎ) ಕಂಪನಿಯು ಹೈದರಾಬಾದ್‌ನಲ್ಲಿ ಜಾಗತಿಕ ಡಿಜಿಟಲ್‌ ಕೇಂದ್ರ ಸ್ಥಾಪಿಸಲು ₹ 1,103 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದೆ.

ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಈ ಕೇಂದ್ರವನ್ನು ಬಳಸಲಾಗುವುದು.ಕನೆಕ್ಟೆಡ್‌ ವೆಹಿಕಲ್ ಸರ್ವೀಸಸ್‌, ದತ್ತಾಂಶ ವಿಜ್ಞಾನ, ಕ್ಲೌಡ್‌ ಸೇವೆಗಳು... ಹೀಗೆ ಇನ್ನೂ ಹಲವು ಬಗೆಯ ತಂತ್ರಜ್ಞಾನಗಳ ಬಗ್ಗೆ ಈ ಕೇಂದ್ರವು ಗಮನ ಹರಿಸಲಿದೆ ಎಂದು ಕಂಪನಿ ಹೇಳಿದೆ.

ಉತ್ತರ ಅಮೆರಿಕದ ಆಚೆಗೆ ಕಂಪನಿಯ ಅತಿದೊಡ್ಡ ಡಿಜಿಟಲ್‌ ಕೇಂದ್ರ ಇದಾಗಲಿದ್ದು, ಮುಂದಿನ ವರ್ಷದ ಅಂತ್ಯದ ವೇಳೆಗೆ ಒಂದು ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಎಫ್‌ಸಿಎ ಉತ್ತರ ಅಮೆರಿಕ ಮತ್ತು ಏಷ್ಯಾ ಪೆಸಿಫಿಕ್‌ ಸಿಐಒ ಮಮತಾ ಚಮರ್ತಿ ತಿಳಿಸಿದ್ದಾರೆ.

ADVERTISEMENT

ಕಂಪನಿಯ ಜಾಗತಿಕ ತಂಡದ ಭಾಗವಾಗಿ ಹೈದರಾಬಾದ್‌ನ ಕೇಂದ್ರವು ಕಾರ್ಯಾಚರಿಸಲಿದ್ದು, ಭಾರತದ ಅತ್ಯುತ್ತಮ ಡಿಜಿಟಲ್‌ ಕೌಶಲಗಳನ್ನು ಆಕರ್ಷಿಸಲಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.