ADVERTISEMENT

ಎನ್‌ಎಂಪಿ: ನಿರ್ಮಲಾ ಅವರಿಂದ ಸೋಮವಾರ ಚಾಲನೆ

ಪಿಟಿಐ
Published 22 ಆಗಸ್ಟ್ 2021, 18:46 IST
Last Updated 22 ಆಗಸ್ಟ್ 2021, 18:46 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್    

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ’ಗೆ (ಎನ್‌ಎಂಪಿ) ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರವು ತನ್ನ ಯಾವೆಲ್ಲ ಮೂಲಸೌಕರ್ಯ ಆಸ್ತಿಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಮಾರಾಟ ಮಾಡಲಿದೆ ಎಂಬುದನ್ನು ಎನ್‌ಎಂಪಿ ತಿಳಿಸಲಿದೆ.

‘ಕೇಂದ್ರವು ಬಳಕೆ ಮಾಡುತ್ತಿಲ್ಲದ ಮೂಲಸೌಕರ್ಯ ಆಸ್ತಿಗಳ ವಿವರವು ಎನ್‌ಎಂಪಿಯಲ್ಲಿ ಇರಲಿದೆ. ಹೂಡಿಕೆದಾರರಿಗೆ ಇವುಗಳ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ, ಇದು ಕೇಂದ್ರಕ್ಕೆ ಮಧ್ಯಮಾವಧಿಯಲ್ಲಿ ಆಸ್ತಿಯನ್ನು ನಗದೀಕರಿಸಿಕೊಳ್ಳಲು ಮಾರ್ಗವೊಂದನ್ನು ತೋರಿಸುತ್ತದೆ’ ಎಂದು ನೀತಿ ಆಯೋಗವು ಹೇಳಿದೆ.

ನಗದೀಕರಣಕ್ಕೆ ಪರಿಗಣಿಸಲು ₹ 6 ಲಕ್ಷ ಕೋಟಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಸರ್ಕಾರವು ಅಂತಿಮಗೊಳಿಸುತ್ತಿದೆ. ಈ ಪಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ವಿದ್ಯುತ್ ಗ್ರಿಡ್‌ಗಳೂ ಸೇರಿವೆ ಎಂದು ಕೇಂದ್ರ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಈಚೆಗೆ ಹೇಳಿದ್ದರು.

ADVERTISEMENT

ಎನ್‌ಎಂಪಿಗೆ ಚಾಲನೆ ನೀಡಲಾಗುವುದು ಎಂದು ನಿರ್ಮಲಾ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.