ADVERTISEMENT

ಭಾರತದ ಜಿಡಿಪಿ ಅಂದಾಜು ತಗ್ಗಿಸಿದ ಫಿಚ್‌

ಪಿಟಿಐ
Published 15 ಸೆಪ್ಟೆಂಬರ್ 2022, 13:37 IST
Last Updated 15 ಸೆಪ್ಟೆಂಬರ್ 2022, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫಿಚ್‌ ರೇಟಿಂಗ್ಸ್‌ ಸಂಸ್ಥೆಯು ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇಕಡ 7ಕ್ಕೆ ತಗ್ಗಿಸಿದೆ.

ಈ ಮೊದಲು, ಜಿಡಿಪಿಯು ಶೇ 7.8ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅದು ಜೂನ್‌ನಲ್ಲಿ ಅಂದಾಜು ಮಾಡಿತ್ತು. ಹಣದುಬ್ಬರ ಏರಿಕೆ ಆಗಿರುವುದು ಹಾಗೂ ಬಡ್ಡಿದರವು ಗರಿಷ್ಠ ಮಟ್ಟದಲ್ಲಿ ಇರುವ ಕಾರಣಗಳನ್ನು ನೀಡಿ ಬೆಳವಣಿಗೆ ಅಂದಾಜನ್ನು ತಗ್ಗಿಸಿದೆ.

2023–24ನೇ ಹಣಕಾಸು ವರ್ಷಕ್ಕೆ ಸಹ ಜಿಡಿಪಿ ಬೆಳವಣಿಗೆಯು ಶೇ 7.4ಕ್ಕೆ ಬದಲಾಗಿ ಶೇ 6.7ರಷ್ಟು ಆಗಲಿದೆ ಎಂದು ಪರಿಷ್ಕೃತ ಅಂದಾಜಿನಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.