ADVERTISEMENT

ಆರ್ಥಿಕ ಬೆಳವಣಿಗೆಯ ಮುನ್ನೋಟ ನಕಾರಾತ್ಮಕ: ಫಿಚ್

ಕೋವಿಡ್‌ ಪರಿಣಾಮ

ಪಿಟಿಐ
Published 18 ಜೂನ್ 2020, 11:06 IST
Last Updated 18 ಜೂನ್ 2020, 11:06 IST
ಆರ್ಥಿಕ ಬೆಳವಣಿಗೆ
ಆರ್ಥಿಕ ಬೆಳವಣಿಗೆ   

ನವದೆಹಲಿ: ಫಿಚ್‌ ರೇಟಿಂಗ್ಸ್‌ ಸಂಸ್ಥೆಯು ಎಂಟು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ತಗ್ಗಿಸಿದೆ.

ಸರ್ಕಾರದ ಸಾಲದ ಹೊರೆ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಕೋವಿಡ್‌ ಬಿಕ್ಕಟ್ಟಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಮುನ್ನೋಟವು ಸ್ಥಿರತೆಯಿಂದ ನಕಾರಾತ್ಮಕ ಮಟ್ಟಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದೆ.

ಮಾರ್ಚ್‌ 25ರಿಂದ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದರಿಂದ 2021ರ ಮಾರ್ಚ್‌ ಅಂತ್ಯಕ್ಕೆ ಜಿಡಿಪಿ ಬೆಳವಣಿಗೆ ಶೇ 5ರಷ್ಟಾಗಲಿದೆ. 2021–22ರಲ್ಲಿ ಶೇ 9.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದೂ ಹೇಳಿದೆ.

ADVERTISEMENT

ಹೂಡಿಕೆಗೆ ಸಂಬಂಧಿಸಿದಂತೆ ಭಾರತಕ್ಕೆ ನೀಡಿರುವ ಅತ್ಯಂತ ಕನಿಷ್ಠ ರೇಟಿಂಗ್ಸ್‌ ‘ಬಿಬಿಬಿ ಮೈನಸ್’ನಲ್ಲಿ‌ ಯಾವುದೇ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.