ADVERTISEMENT

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್: ಪ್ರತಿ ಸೆಕೆಂಡ್‌ಗೆ 2 ವಾಚ್ ಮಾರಾಟ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2021, 9:02 IST
Last Updated 11 ಅಕ್ಟೋಬರ್ 2021, 9:02 IST
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅಂಕಿ-ಅಂಶ ಬಿಡುಗಡೆ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅಂಕಿ-ಅಂಶ ಬಿಡುಗಡೆ   

ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್, ವಾರ್ಷಿಕ ಬಿಗ್ ಬಿಲಿಯನ್ ಡೇ ಸೇಲ್ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 2ರಿಂದ ಆರಂಭವಾದ ಬಿಗ್ ಬಿಲಿಯನ್ ಡೇ ಆಫರ್ ಸೇಲ್, ಅ. 10ರವರೆಗೆ ನಡೆದಿತ್ತು. ಈ ಅವಧಿಯಲ್ಲಿ ದುಬೈನ ಬುರ್ಜ್ ಖಲೀಫಾ ಕಟ್ಟಡದ ಎತ್ತರಕ್ಕೆ ಹೋಲಿಕೆ ಮಾಡಿ, ಸೇಲ್ ಆಗಿರುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆಯನ್ನು ಫ್ಲಿಪ್‌ಕಾರ್ಟ್ ಬಿಡುಗಡೆ ಮಾಡಿದೆ.

1,000 ಬುರ್ಜ್ ಖಲೀಫಾಗಳ ಎತ್ತರಕ್ಕೆ ಸಮನಾದ ಸಂಖ್ಯೆಯಷ್ಟು ಸ್ಮಾರ್ಟ್‌ಫೋನ್‌ಗಳನ್ನು ಸೇಲ್‌ ಅವಧಿಯಲ್ಲಿ ಮಾರಾಟ ಮಾಡಿದ್ದೇವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಅಲ್ಲದೆ, ಪ್ರತಿ ಸೆಕೆಂಡ್‌ಗೆ ಎರಡರಂತೆ ವಾಚ್‌ಗಳು ಮಾರಾಟವಾಗಿವೆ.

ADVERTISEMENT

ಜತೆಗೆ 100 ಮೌಂಟ್ ಎವರೆಸ್ಟ್‌ಗಳ ಎತ್ತರಕ್ಕೆ ಸಮನಾದ ಸಂಖ್ಯೆಯಲ್ಲಿ, ಮಾರಾಟವಾದ ಫುಟ್‌ವೇರ್ ಬಾಕ್ಸ್‌ಗಳನ್ನು ಜೋಡಿಸಬಹುದು!

ಮಾರಾಟವಾದ ಬೆಡ್ ಸಂಖ್ಯೆಯನ್ನು ಹೋಲಿಸಿದರೆ, 25 ಫುಟ್‌ಬಾಲ್ ಫೀಲ್ಡ್ ಅನ್ನು ತುಂಬಿಸಬಹುದು, ಅಲ್ಲದೆ, ವಾಂಖೆಡೆ ಸ್ಟೇಡಿಯಂನಲ್ಲಿರುವಷ್ಟು ಆಸನ ಸಾಮರ್ಥ್ಯಕ್ಕೆ ಸಮನಾಗಿ ಸೋಫಾ ಮಾರಾಟವಾಗಿದೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.