ADVERTISEMENT

ರೆಪೊ ದರ ಕಡಿತ: ಬಡ್ಡಿದರ ಇಳಿಸಿದ ಪಿಎನ್‌ಬಿ, ಇಂಡಿಯನ್‌ ಬ್ಯಾಂಕ್‌

ಪಿಟಿಐ
Published 10 ಏಪ್ರಿಲ್ 2025, 12:36 IST
Last Updated 10 ಏಪ್ರಿಲ್ 2025, 12:36 IST
ಇಂಡಿಯನ್‌ ಬ್ಯಾಂಕ್‌
ಇಂಡಿಯನ್‌ ಬ್ಯಾಂಕ್‌   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರ ಕಡಿತಗೊಳಿಸಿದ ಬೆನ್ನಲ್ಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತು ಇಂಡಿಯನ್ ಬ್ಯಾಂಕ್‌ ಬಡ್ಡಿದರ ಕಡಿತಗೊಳಿಸಿವೆ.

ಇಂಡಿಯನ್‌ ಬ್ಯಾಂಕ್‌ ರೆ‍‍ಪೊ ಆಧರಿತ ಸಾಲದ ಮೇಲಿನ ಬಡ್ಡಿದರವನ್ನು ಶೇ 0.35ರಷ್ಟು ಕಡಿತಗೊಳಿಸಿದ್ದು, ಶೇ 8.70ಕ್ಕೆ ನಿಗದಿಪಡಿಸಿದೆ. ಶುಕ್ರವಾರದಿಂದ ಈ ಪರಿಷ್ಕೃತ ದರ ಜಾರಿಯಾಗಲಿದೆ.

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ ಬಡ್ಡಿದರವನ್ನು ಶೇ 9.10ರಿಂದ ಶೇ 8.85ಕ್ಕೆ ತಗ್ಗಿಸಿದೆ. ಈ ಪರಿಷ್ಕೃತ ದರವು ಗುರುವಾರದಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ADVERTISEMENT

ಈಗಾಗಲೇ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಯುಕೊ ಬ್ಯಾಂಕ್‌ ಬಡ್ಡಿದರ ಕಡಿತ ಮಾಡಿವೆ. ಆರ್‌ಬಿಐ ರೆಪೊ ದರವನ್ನು ಶೇ 6.25ರಿಂದ ಶೇ 6ಕ್ಕೆ ತಗ್ಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.