ADVERTISEMENT

ಎಫ್‌ಪಿಐ ಹೊರಹರಿವು ಹೆಚ್ಚಳ

ಪಿಟಿಐ
Published 26 ಮೇ 2019, 20:00 IST
Last Updated 26 ಮೇ 2019, 20:00 IST
   

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಮೇ 1 ರಿಂದ 24ರವರೆಗೆ ಬಂಡವಾಳ ಮಾರುಕಟ್ಟೆಯಿಂದ ₹ 4,375 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

ದೇಶಿ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಬಂಡವಾಳ ಮಾರುಕಟ್ಟೆಯಲ್ಲಿಇದಕ್ಕೂ ಮೊದಲು ಫೆಬ್ರುವರಿಯಲ್ಲಿ ₹ 11,182 ಕೋಟಿ, ಮಾರ್ಚ್‌ನಲ್ಲಿ ₹45,981 ಕೋಟಿ ಮತ್ತು ಏಪ್ರಿಲ್‌ನಲ್ಲಿ ₹ 16,093ಕೋಟಿ ಹೂಡಿಕೆ ಮಾಡಿದ್ದರು.

ADVERTISEMENT

ಚುನಾವಣಾ ಫಲಿತಾಂಶದ ದಿನದಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,352 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

‘ಎರಡನೇ ಅವಧಿಯಲ್ಲಿ ಎನ್‌ಡಿಎ ಸರ್ಕಾರ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎನ್ನುವ ಬಗ್ಗೆ ಹೂಡಿಕೆದಾರರು ಕುತೂಹಲ ತಳೆದಿದ್ದಾರೆ. ಬ್ಯಾಂಕ್‌, ಭಾರಿ ಯಂತ್ರೋಪಕರಣಗಳು ಮತ್ತು ಮೂಲಸೌಕರ್ಯ ವಲಯಗಳ ಬಗ್ಗೆ ಸಾಂಸ್ಥಿಕ ಹೂಡಿಕೆದಾರರ ಆಸಕ್ತಿ ಹೆಚ್ಚಾಗಲಿದೆ’ ಎಂದು ಫಂಡ್ಸ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ವಿದ್ಯಾ ಬಾಲಾ ಅಭಿಪ್ರಯ
ಪ‍ಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.