ADVERTISEMENT

ವಿದೇಶಿ ಬಂಡವಾಳ ಹೂಡಿಕೆ: ₹26,565 ಕೋಟಿ ಒಳಹರಿವು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:58 IST
Last Updated 30 ಜೂನ್ 2024, 13:58 IST
,,,,,,
,,,,,,   

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಜೂನ್‌ ತಿಂಗಳಿನಲ್ಲಿ ಒಟ್ಟು ₹26,565 ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ.

ಕಳೆದ ಎರಡು ತಿಂಗಳಿನಲ್ಲಿ ವಿದೇಶಿ ಬಂಡವಾಳ ಹೂಡಿಕೆಯು ಕಡಿಮೆಯಾಗಿತ್ತು. ರಾಜಕೀಯ ಸ್ಥಿರತೆ ಹಾಗೂ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿರುವುದರಿಂದ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

‘ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಕೇಂದ್ರದ ಬಜೆಟ್‌ ಹಾಗೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳು ಗಳಿಸುವ ಲಾಭದತ್ತ ದೃಷ್ಟಿ ನೆಟ್ಟಿದ್ದಾರೆ. ಹಾಗಾಗಿ, ಒಳಹರಿವು ಪ್ರಮಾಣದಲ್ಲಿ ಸ್ಥಿರತೆ ಸಾಧ್ಯವಾಗಿದೆ’ ಎಂದು ಹಣಕಾಸು ಸಲಹಾ ಸಂಸ್ಥೆ ವಾಟರ್‌ಫೀಲ್ಡ್‌ ಅಡ್ವೈಸರ್ಸ್‌ನ ನಿರ್ದೇಶಕ ವಿಪುಲ್ ಭೋವರ್ ಹೇಳಿದ್ದಾರೆ.‌

ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶದ ಅನಿಶ್ಚಿತತೆಯಿಂದಾಗಿ ವಿದೇಶಿ ಹೂಡಿಕೆದಾರರು ಷೇರುಪೇಟೆಗಳಿಂದ ಏಪ್ರಿಲ್‌ನಲ್ಲಿ ₹8,700 ಕೋಟಿ ಹಾಗೂ ₹25,586 ಕೋಟಿ ಬಂಡವಾಳ ಹಿಂಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.