ADVERTISEMENT

ಎಫ್‌ಪಿಐ: ₹5,800 ಕೋಟಿ ವಾಪಸ್

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು, ಬಡ್ಡಿ ದರ ಹೆಚ್ಚಳದಿಂದ ಹೂಡಿಕೆ ಹಿಂತೆಗೆತ

ಪಿಟಿಐ
Published 12 ನವೆಂಬರ್ 2023, 16:56 IST
Last Updated 12 ನವೆಂಬರ್ 2023, 16:56 IST
ಸಾಂಕೇತಿಕ
ಸಾಂಕೇತಿಕ   

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಬಡ್ಡಿ ದರ ಹೆಚ್ಚಳದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಷೇರು ಮಾರುಕಟ್ಟೆಯಿಂದ ₹5,800 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಈ ತಿಂಗಳಲ್ಲಿ ಹಿಂದಕ್ಕೆ ಪಡೆದಿದ್ದಾರೆ.

ಅಕ್ಟೋಬರ್‌ನಲ್ಲಿ ₹24,548 ಕೋಟಿ ಮತ್ತು ಸೆಪ್ಟೆಂಬರ್‌ನಲ್ಲಿ ₹14,767 ಕೋಟಿ ಹಣವನ್ನು ಹೂಡಿಕೆದಾರರು ವಾಪಸ್‌ ಪಡೆದಿದ್ದರು.

ಕಳೆದ ಆರು ತಿಂಗಳಲ್ಲಿ (ಮಾರ್ಚ್‌ನಿಂದ ಆಗಸ್ಟ್‌) ಹೊರಹರಿವಿಗಿಂತ ಮುಂಚೆ ಎಫ್‌ಪಿಐ ₹1.74 ಲಕ್ಷ ಕೋಟಿ ಭಾರತದಲ್ಲಿ ಹೂಡಿಕೆಯಾಗಿತ್ತು. ಅಂಕಿ ಅಂಶಗಳ ಪ್ರಕಾರ ನವೆಂಬರ್‌ 1ರಿಂದ 10ರವರೆಗೆ ₹5,805 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗಿದೆ. ಸೆಪ್ಟೆಂಬರ್‌ನಿಂದ ಆರಂಭವಾದ ಎಫ್‌ಪಿಐ ಮಾರಾಟ ಪ್ರಕ್ರಿಯೆ ನವೆಂಬರ್‌ನಲ್ಲಿ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. 

ADVERTISEMENT

ಇಸ್ರೇಲ್‌ ಮತ್ತು ಹಮಾಸ್‌ ಸಂಘರ್ಷದಿಂದಾಗಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಮತ್ತು ಅಮೆರಿಕದಲ್ಲಿ ಬಾಂಡ್‌ ಲಾಭ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಮಾರ್ನಿಂಗ್‌ಸ್ಟಾರ್ ಇನ್‌ವೆಸ್ಟ್‌ಮೆಂಟ್ ಅಡ್ವೈಸರ್ ಇಂಡಿಯಾದ ಸಹ ನಿರ್ದೇಶಕ ಹಿಮಾಂಶು ಶ್ರೀವಾಸ್ತವ್‌ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನ ಮತ್ತು ಅಮೆರಿಕ ಡಾಲರ್‌ ಕಡೆ ಗಮನ ಹರಿಸುವುದು ಸುರಕ್ಷಿತ ಎಂದು ತಜ್ಞರು ನಂಬಿದ್ದಾರೆ ಎಂದು  ಶ್ರೀವಾಸ್ತವ್‌ ಹೇಳಿದ್ದಾರೆ. 

ಸಾಂಕೇತಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.