ADVERTISEMENT

ಎಫ್‌ಪಿಐ ಒಳಹರಿವು ಅಬಾಧಿತ

ಜುಲೈನಲ್ಲಿ ₹45,365 ಕೋಟಿ ಬಂಡವಾಳ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 15:36 IST
Last Updated 29 ಜುಲೈ 2023, 15:36 IST
   

ಬೆಂಗಳೂರು: ಭಾರತದ ಷೇರುಪೇಟೆಗಳಲ್ಲಿ ಜುಲೈನಲ್ಲಿಯೂ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ಮುಂದುವರಿದಿದೆ. ಜುಲೈ ತಿಂಗಳಿನಲ್ಲಿ 28ರವರೆಗಿನ ವಹಿವಾಟಿನಲ್ಲಿ ಒಟ್ಟು ₹45,365 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ವಿದೇಶಿ ಹೂಡಿಕೆದಾರರು ಮೇ 1 ರಿಂದ ಜುಲೈ 28ರವರೆಗೆ ನಡೆದಿರುವ ವಹಿವಾಟಿನಲ್ಲಿ ₹1.36 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ವಿದೇಶಿ ಹೂಡಿಕೆದಾರರು ಖರೀದಿಸುವ ವೇಗಕ್ಕೆ ತುಸು ಕಡಿವಾಣ ಬಿದ್ದಂತೆ ಕಾಣುತ್ತಿದೆ. ಜುಲೈ 28ಕ್ಕೆ ಕೊನೆಗೊಂಡ ವಾರದ ಕೊನೆಯ ಎರಡು ದಿನಗಳ ವಹಿವಾಟಿನಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶದಲ್ಲಿ ನಡೆಯುವ ವಿದ್ಯಮಾನಗಳಲ್ಲದೆ, ಬಾಹ್ಯ ಕಾರಣಗಳು ಸಹ ಅವರ ಖರೀದಿ/ಮಾರಾಟದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಡಾಲರ್‌ ಮೌಲ್ಯದಲ್ಲಿ ಆಗುವ ಏರಿಳಿತ, ಅಮೆರಿಕದ ಬಾಂಡ್‌ ಗಳಿಕೆ ಮತ್ತು ಜಾಗತಿಕ ಮಾರುಕಟ್ಟೆಯ ಚಲನೆಯು ಮುಖ್ಯವಾಗಲಿವೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

2023ರ ಮೊದಲ ಮೂರು ತಿಂಗಳುಗಳಲ್ಲಿ ಹಣಕಾಸು ವಲಯದ ಯಾವ ಷೇರುಗಳನ್ನು ಮಾರಾಟ ಮಾಡಿದ್ದರು. ಇದೀಗ ಅದೇ ಷೇರುಗಳನ್ನು ಮರಳಿ ಖರೀದಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.