ADVERTISEMENT

ವಿಜೇತರಿಗೆ ಫ್ರೀಡಂ ಆಯಿಲ್‌ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 15:44 IST
Last Updated 7 ಫೆಬ್ರುವರಿ 2025, 15:44 IST
‘ಗೋ ಫಾರ್‌ ಫ್ರೀಡಂ ಗೋಲ್ಡ್‌ ಆಫರ್’ನ ಬಂಪರ್‌ ಡ್ರಾ ವಿಜೇತರಿಗೆ ನಟಿ ಆಶಿಕಾ ರಂಗನಾಥ್‌ ಬಹುಮಾನ ವಿತರಿಸಿದರು. ಕಂಪನಿಯ ಅಧಿಕಾರಿಗಳು ಇದ್ದರು
‘ಗೋ ಫಾರ್‌ ಫ್ರೀಡಂ ಗೋಲ್ಡ್‌ ಆಫರ್’ನ ಬಂಪರ್‌ ಡ್ರಾ ವಿಜೇತರಿಗೆ ನಟಿ ಆಶಿಕಾ ರಂಗನಾಥ್‌ ಬಹುಮಾನ ವಿತರಿಸಿದರು. ಕಂಪನಿಯ ಅಧಿಕಾರಿಗಳು ಇದ್ದರು   

ಬೆಂಗಳೂರು: ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ಸ್‌ನಿಂದ ಹಮ್ಮಿಕೊಂಡಿದ್ದ ‘ಗೋ ಫಾರ್‌ ಫ್ರೀಡಂ ಗೋಲ್ಡ್‌ ಆಫರ್’ನ ಬಂಪರ್‌ ಡ್ರಾ ವಿಜೇತರಿಗೆ, ನಟಿ ಆಶಿಕಾ ರಂಗನಾಥ್‌ ಬಹುಮಾನ ವಿತರಿಸಿದರು.

ಪ್ರತಿ ರಾಜ್ಯದಿಂದ ಒಬ್ಬ ವಿಜೇತರಿಗೆ 50 ಗ್ರಾಂ ಚಿನ್ನದ ನಾಣ್ಯ ಮತ್ತು ಇಬ್ಬರು ವಿಜೇತರಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯ ನೀಡಲಾಗಿದೆ ಎಂದು ಜೆಮಿನಿ ಎಡಿಬಲ್ಸ್ ಆ್ಯಂಡ್‌ ಫ್ಯಾಟ್ಸ್ ಇಂಡಿಯಾ ಲಿಮಿಟೆಡ್‌ ತಿಳಿಸಿದೆ.

ಹಬ್ಬದ ಋತುವಿನ ಅಂಗವಾಗಿ ಕಂಪನಿಯು ‘ಗೋ ಫಾರ್ ಫ್ರೀಡಂ ಗೋಲ್ಡ್‌ ಆಫರ್ 2024’ ಅನ್ನು ಆರಂಭಿಸಿತ್ತು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಛತ್ತೀಸಗಢದಲ್ಲಿ ಈ ಸ್ಪರ್ಧೆ ಆರಂಭಿಸಲಾಗಿತ್ತು. ಇದರಲ್ಲಿ ಭಾಗವಹಿಸುವವರು 2 ಲೀಟರ್‌ ಫ್ರೀಡಂ ರಿಫೈನ್ಡ್‌ ಸೂರ್ಯಕಾಂತಿ ಎಣ್ಣೆ ಖರೀದಿಸಬೇಕಿತ್ತು ಎಂದು ತಿಳಿಸಿದೆ.

ADVERTISEMENT

‘ಸ್ಪರ್ಧೆಯ ಭಾಗವಾಗಿ ಈ ರಾಜ್ಯಗಳಲ್ಲಿ ಐವರು ವಿಜೇತರು (ಪ್ರತಿ ರಾಜ್ಯದಿಂದ ಒಬ್ಬರು) ಮತ್ತು 10 ವಿಜೇತರು (ಪ್ರತಿ ರಾಜ್ಯದಿಂದ ಇಬ್ಬರು) ಚಿನ್ನದ ನಾಣ್ಯ ಪಡೆದಿದ್ದಾರೆ. ರಾಜ್ಯದಾದ್ಯಂತ ಒಟ್ಟು 5,500 ವಿಜೇತರು 1 ಗ್ರಾಂ ಚಿನ್ನದ ನಾಣ್ಯ ಪಡೆದಿದ್ದಾರೆ’ ಎಂದು ಕಂಪನಿಯ ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ಚಂದ್ರಶೇಖರರೆಡ್ಡಿ ತಿಳಿಸಿದ್ದಾರೆ.

‘ಫ್ರೀಡಂ ಸೂರ್ಯಕಾಂತಿ ಎಣ್ಣೆಯು ಪ್ರಮುಖ ಬ್ರ್ಯಾಂಡ್ ಆಗಿದೆ. ದೇಶದಲ್ಲಿ ಸೂರ್ಯಕಾಂತಿ ಎಣ್ಣೆ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಚೇತನ್‌ ಪಿಂಪಲ್ಖುಟೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.