ADVERTISEMENT

ಇಂಧನ ಬೇಡಿಕೆ ಶೇ 10 ಇಳಿಕೆ

ಪಿಟಿಐ
Published 20 ಮಾರ್ಚ್ 2020, 5:14 IST
Last Updated 20 ಮಾರ್ಚ್ 2020, 5:14 IST
   

ನವದೆಹಲಿ: ಕೊರೊನಾದಿಂದಾಗಿ ಪ್ರಯಾಣ ನಿರ್ಬಂಧ, ವಿಮಾನ ಹಾರಾಟ ಮತ್ತು ಕೈಗಾರಿಕಾ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಹೀಗಾಗಿ ಇಂಧನ ಬೇಡಿಕೆಯು ಮಾರ್ಚ್‌ನ 15 ದಿನದಲ್ಲಿ ಶೇ 10–11ರಷ್ಟು ಇಳಿಕೆಯಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ತಿಳಿಸಿದೆ.

2019ರ ಮಾರ್ಚ್‌ನಲ್ಲಿ 15 ದಿನಗಳಲ್ಲಿ 1 ಕೋಟಿ ಟನ್‌ ಪೆಟ್ರೋಲಿಯಂ ಉತ್ಪನ್ನಗಳು ಬಳಕೆಯಾಗಿದ್ದವು.

ಮಾರಾಟ ಇಳಿಕೆ: ಪೆಟ್ರೋಲ್‌ ಶೇ 2, ಡೀಸೆಲ್‌ ‌ ಶೇ 13, ಜೆಟ್‌ ಇಂಧನ ಶೇ 10 ರಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ADVERTISEMENT

ಒಟ್ಟಾರೆ ಕಚ್ಚಾ ತೈಲ ಬಳಕೆಯಲ್ಲಿ ವಿಮಾನಯಾನ ಉದ್ದಿಮೆಯ ಪಾಲು ಶೇ 6–8ರಷ್ಟಿದೆ. ಎರಡರಿಂದ ಮೂರು ತಿಂಗಳುಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರದೇ ಇದ್ದರೆ ತೈಲ ಬಳಕೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಕ್ರಿಸಿಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.