ನವದೆಹಲಿ : ಗೇಲ್ ಇಂಡಿಯಾ ಲಿಮಿಟೆಡ್ ಕಂಪನಿಯ ನಿವ್ವಳ ಲಾಭವು 2023ರ ಮಾರ್ಚ್ ತ್ರೈಮಾಸಿಕದಲ್ಲಿ ಶೇ 77.5ರಷ್ಟು ಕುಸಿತ ಕಂಡಿದ್ದು ₹603 ಕೋಟಿಗೆ ತಲುಪಿದೆ.
2022ರ ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹2,683 ಕೋಟಿಯಷ್ಟು ಇತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
ಅನಿಲ ದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ರಷ್ಯಾದಿಂದ ಪೂರೈಕೆಗೆ ಅಡ್ಡಿಯಾಗಿರುವುದೇ ಲಾಭದಲ್ಲಿ ಕುಸಿತ ಕಾಣಲು ಕಾರಣ ಎಂದು ಅದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.