ADVERTISEMENT

'ಫ್ಲಿಪ್‌' ಆ್ಯಪ್‌ ಬಿಡುಗಡೆ ಮಾಡಿದ ಜಿಯೋಜಿತ್

​ಪ್ರಜಾವಾಣಿ ವಾರ್ತೆ
Published 20 ಮೇ 2023, 14:59 IST
Last Updated 20 ಮೇ 2023, 14:59 IST

ಬೆಂಗಳೂರು: ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮೊಬೈಲ್‌ ಮೂಲಕ ವಹಿವಾಟು ನಡೆಸಲು ಅನುಕೂಲ ಆಗುವಂತೆ ಫ್ಲಿಪ್ (FLIP) ಆ್ಯಪ್‌ ಬಿಡುಗಡೆ ಮಾಡಿದೆ. ಈಗಾಗಲೇ ಇರುವ ‘SELFIE’ ಆ್ಯಪ್‌ಗೆ ಬದಲಾಗಿ ಈ ಆ್ಯಪ್‌ ಅನ್ನು ಕಂಪನಿ ಪರಿಚಯಿಸಿದೆ. ಸುಧಾರಿತ ವೈಶಿಷ್ಟ್ಯಗಳ ಮೂಲಕ ಸಮಗ್ರ ಮತ್ತು ಅನುಕೂಲಕರವಾದ ವಹಿವಾಟಿನ ಅನುಭವವನ್ನು ಹೊಸ ಆ್ಯಪ್‌ ನೀಡಲಿದೆ ಎಂದು ಹೇಳಿದೆ.

ತಾಂತ್ರಿಕ ಮತ್ತು ಮೂಲಭೂತ ಸಂಶೋಧನೆ, ಷೇರು ವಿಶ್ಲೇಷಣಾ ಪುಟ, ಸುಧಾರಿತ ಚಾರ್ಟ್‌, ವಹಿವಾಟುದಾರರು ಮತ್ತು ಹೂಡಿಕೆಗಳ ಮಾಹಿತಿ ನೀಡುವ ಡ್ಯಾಷ್‌ಬೋರ್ಡ್‌ಗಳನ್ನು ‘FLIP’ ಆ್ಯಪ್‌ ಒಳಗೊಂಡಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಟ್ರೇಡಿಂಗ್ ಫಾರ್‌ ಚಾರ್ಟ್ಸ್‌, ಸ್ಪ್ಲಿಟ್‌ ಆರ್ಡರ್‌ ಫಾರ್‌ ಆಪ್ಶನ್ಸ್‌ ಮತ್ತು ಐಪಿಒಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ಇನ್ನೂ ಹಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮೂರು ತಿಂಗಳುಗಳಲ್ಲಿ ಪರಿಚಯಿಸಲಾಗುವುದು ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಜೋನ್ಸ್‌ ಜಾರ್ಜ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.