ADVERTISEMENT

ಗೋದ್ರೇಜ್ ಅಪ್ಲೈಯನ್ಸ್‌: ಎ.ಐ ಆಧಾರಿತ ಉತ್ಪನ್ನಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 10:25 IST
Last Updated 13 ಆಗಸ್ಟ್ 2024, 10:25 IST
ಗೋದ್ರೇಜ್ ಅಪ್ಲೈಯನ್ಸ್‌ನಿಂದ ಎ.ಐ ಆಧಾರಿತ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ
ಗೋದ್ರೇಜ್ ಅಪ್ಲೈಯನ್ಸ್‌ನಿಂದ ಎ.ಐ ಆಧಾರಿತ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ   

ಬೆಂಗಳೂರು: ಗೋದ್ರೇಜ್‌ ಎಂಟರ್‌ಪ್ರೈಸಸ್‌ ಗ್ರೂಪ್‌ನ ಗೋದ್ರೇಜ್  ಆ್ಯಂಡ್‌ ಬಾಯ್ಸ್‌ನ ಅಪ್ಲೈಯನ್ಸ್‌ನಿಂದ ಬೆಂಗಳೂರಿನ ಗ್ರಾಹಕರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಶ್ರೇಣಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ವಾಷಿಂಗ್‌ ಮಷಿನ್‌, ರೆಫ್ರಿಜರೇಟರ್‌ ಮತ್ತು ಏರ್‌ ಕಂಡೀಷನರ್‌ಗಳಿಗೆ ಸಂಬಂಧಿಸಿದಂತೆ ಗೋದ್ರೇಜ್‌ನ ಉಪಕರಣಗಳ ಶ್ರೇಣಿಗಳಲ್ಲಿ ಎ.ಐ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಬಳಕೆಯ ಮೇಲ್ವಿಚಾರಣೆ ಮಾಡುತ್ತದೆ. ಜೊತೆಗೆ, ಇತರೆ ಹಲವು ಕಾರ್ಯವೈಖರಿಗಳನ್ನೂ ಗಮನಿಸುತ್ತದೆ.

ಸುತ್ತಮುತ್ತಲಿನ ಹವಾಮಾನದ ಪರಿಸ್ಥಿತಿ, ರೆಫ್ರಿಜರೇಟರ್‌ನಲ್ಲಿ ಇರಿಸಿದ ಆಹಾರದ ಪ್ರಮಾಣ, ವಾಷಿಂಗ್‌ ಮಷಿನ್‌ಗೆ ಹಾಕುವ ಬಟ್ಟೆಯ ಪ್ರಮಾಣ ಮುಂತಾದ ವಿವರವನ್ನು ಸಮರ್ಪಕವಾಗಿ ಗ್ರಹಿಸುತ್ತದೆ. ಅದಕ್ಕೆ ಅನುಗುಣವಾಗಿ ಗೃಹೋಪಯೋಗಿ ಸಲಕರಣೆಗಳ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ADVERTISEMENT

ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪನಿಯು 400ಕ್ಕೂ ಹೆಚ್ಚು ಲೀಟರ್‌ನ ಫ್ರಾಸ್ಟ್ ಫ್ರೀ ರೆಫ್ರಿಜರೇಟರ್‌, 10 ಕೆ.ಜಿ ಸಾಮರ್ಥ್ಯದ ಫ್ರಂಟ್ ಲೋಡ್‌ ವಾಷಿಂಗ್ ಮಷಿನ್‌ ಮತ್ತು 2.5 ಟಿಆರ್‌ ಏರ್ ಕಂಡೀಷನರ್‌ಗಳಂತಹ ಹೆಚ್ಚಿನ ಸಾಮರ್ಥ್ಯದ ಗೃಹೋಪಯೋಗಿ ಸಲಕರಣೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸ್ವಾತಂತ್ರ್ಯ ದಿನದ ವಾರದಿಂದ ಹಬ್ಬದ ಋತು ಪ್ರಾರಂಭವಾಗುತ್ತಿದೆ. ವಿಸ್ತೃತ ವಾರಂಟಿಯಿಂದ ಹಿಡಿದು ಕ್ಯಾಷ್‌ಬ್ಯಾಕ್‌ ಮತ್ತು ಸುಲಭದ ಮಾಸಿಕ ಸಮಾನ ಕಂತು (ಇಎಂಐ) ಮತ್ತಿತರ ಕೊಡುಗೆಗಳನ್ನು ಕಲ್ಪಿಸಲಾಗಿದೆ.

‘ಪ್ರೀಮಿಯಂ ಉತ್ಪನ್ನಗಳ ಶ್ರೇಣಿಗೆ ಹೆಚ್ಚಿನ ಸಾಮರ್ಥ್ಯ, ತಂತ್ರಜ್ಞಾನಗಳ ಉತ್ಪನ್ನಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದೆ. ಜೊತೆಗೆ, ಹಲವಾರು ಆಕರ್ಷಕ ಕೊಡುಗೆಗಳನ್ನೂ ನೀಡಲಾಗುತ್ತಿದೆ’  ಎಂದು ಗೋದ್ರೇಜ್ಅ  ಪ್ಲೈಯನ್ಸ್‌ನ ಮಾರಾಟ ವಿಭಾಗದ ಮುಖ್ಯಸ್ಥ ಮತ್ತು ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ತಿಳಿಸಿದ್ದಾರೆ.

‘ಕಾರ್ಯಕ್ಷಮತೆಯ ಗರಿಷ್ಠ ಬಳಕೆ ಮತ್ತು ಹೆಚ್ಚುವರಿ ಅನುಕೂಲತೆ ಕಲ್ಪಿಸಲಾಗಿದೆ. ಜೊತೆಗೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವಿನಿಂದ ಭಾರತದಲ್ಲಿಯೇ ತಯಾರಿಸಿರುವ ವ್ಯಾಪಕವಾದ ಉತ್ಪನ್ನ ಶ್ರೇಣಿ ಪರಿಚಯಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.