ADVERTISEMENT

ಚಿನ್ನದ ಕ್ಷಮಾದಾನ ಯೋಜನೆ?

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 19:35 IST
Last Updated 30 ಅಕ್ಟೋಬರ್ 2019, 19:35 IST
   

ನವದೆಹಲಿ: ಕಪ್ಪು ಹಣ ಬಳಸಿ ಖರೀದಿಸಿ ಲೆಕ್ಕ ನೀಡದ ಚಿನ್ನದ ಪ್ರಮಾಣ ಘೋಷಿಸಿ ಅದಕ್ಕೆ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡುವ ‘ಚಿನ್ನದ ಕ್ಷಮಾದಾನ ಯೋಜನೆ’ಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಪ್ರಕಟಿಸಲಿದೆ.

ಅಪಾರ ಪ್ರಮಾಣದ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಖರೀದಿಸಿ ಅದನ್ನು ತಮ್ಮ ಬಳಿಯಲ್ಲಿ ಇಟ್ಟುಕೊಂಡವರು ಈ ಯೋಜನೆಯಡಿ ಆ ಬಗ್ಗೆ ವಿವರಗಳನ್ನು ನೀಡಬೇಕಾಗುತ್ತದೆ. ಘೋಷಿತ ಚಿನ್ನದ ಮೊತ್ತಕ್ಕೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT