ADVERTISEMENT

Gold and Silver Price: ಚಿನ್ನ ₹1,300, ಬೆಳ್ಳಿ ₹7,400 ಇಳಿಕೆ

ಪಿಟಿಐ
Published 26 ಫೆಬ್ರುವರಿ 2026, 16:03 IST
Last Updated 26 ಫೆಬ್ರುವರಿ 2026, 16:03 IST
ಚಿನ್ನ
ಚಿನ್ನ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಇಳಿಕೆಯಾಗಿದೆ.

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹1,300 ಕಡಿಮೆಯಾಗಿ, ₹1,62,900ರಂತೆ ಮಾರಾಟವಾಗಿದೆ. ಬೆಳ್ಳಿ ದರವು ಕೆ.ಜಿಗೆ ₹7,400 ಇಳಿಕೆಯಾಗಿ ₹2,70,500ಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಲಾಭದ ಗಳಿಕೆಗಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮಾರಾಟಕ್ಕೆ ಮುಂದಾಗಿದ್ದಾರೆ. ಇದು ಬೆಲೆ ಇಳಿಕೆಗೆ ಕಾರಣ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.