ADVERTISEMENT

ಚಿನ್ನದ ಬಾಂಡ್‌: ಗ್ರಾಂಗೆ ₹ 3,214 ನಿಗದಿ

ಪಿಟಿಐ
Published 12 ಜನವರಿ 2019, 19:54 IST
Last Updated 12 ಜನವರಿ 2019, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೋಮವಾರದಿಂದ ಖರೀದಿಗೆ ಲಭ್ಯವಾಗಲಿರುವಚಿನ್ನದಬಾಂಡ್‌ಗಳ (ಎಸ್‌ಜಿಬಿ) ಬೆಲೆಯನ್ನು ಕೇಂದ್ರ ಸರ್ಕಾರ ಪ್ರತಿಗ್ರಾಂಗೆ₹ 3,214ರಂತೆ ನಿಗದಿಪಡಿಸಿದೆ.

2018–19ರ ಐದನೇ ಕಂತಿನ ಚಿನ್ನದ ಬಾಂಡ್‌ ಖರೀದಿ ಅವಧಿ ಜನವರಿ 14ರಿಂದ 18ರವರೆಗೆ ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತಿಳಿಸಿದೆ.

ಆನ್‌ಲೈನ್‌ನಲ್ಲಿ ಖರೀದಿಸುವವರು ಮತ್ತು ನಗದುರಹಿತ (ಡಿಜಿಟಲ್‌) ರೂಪದಲ್ಲಿ ಪಾವತಿಸುವವರಿಗೆಬಾಂಡ್‌ನ ನೀಡಿಕೆ ಬೆಲೆಯಲ್ಲಿ ಪ್ರತಿ ಗ್ರಾಂಗೆ₹ 50ರಂತೆ ಕಡಿತ ನೀಡಲು ಆರ್‌ಬಿಐ ನಿರ್ಧರಿಸಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.