ADVERTISEMENT

ಅಕ್ಷಯ ತೃತೀಯ | ಚಿನ್ನದ ಬೆಲೆ ಏರಿಕೆ; 10 ಗ್ರಾಂಗೆ ₹99,450

ಪಿಟಿಐ
Published 29 ಏಪ್ರಿಲ್ 2025, 14:29 IST
Last Updated 29 ಏಪ್ರಿಲ್ 2025, 14:29 IST
<div class="paragraphs"><p>ಚಿನ್ನ, ಬೆಳ್ಳಿ</p></div>

ಚಿನ್ನ, ಬೆಳ್ಳಿ

   

ನವದೆಹಲಿ: ಅಕ್ಷಯ ತೃತೀಯ ಹಬ್ಬದ ಬೆನ್ನಲ್ಲೇ ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಚಿನ್ನದ ಧಾರಣೆಯು ಏರಿಕೆ ಕಂಡಿದೆ. 

10 ಗ್ರಾಂ ಚಿನ್ನದ (ಶೇ 99.9 ಪರಿಶುದ್ಧತೆ) ಬೆಲೆಯು ₹1,050 ಹೆಚ್ಚಳವಾಗಿದ್ದು, ₹99,450 ಆಗಿದೆ. ಆಭರಣ ಚಿನ್ನದ (ಶೇ 99.5 ಪರಿಶುದ್ಧತೆ) ದರವು ₹1,100 ಹೆಚ್ಚಳವಾಗಿದ್ದು, ₹99 ಸಾವಿರ ಆಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.

ADVERTISEMENT

ಕಳೆದ ವರ್ಷದ ಡಿಸೆಂಬರ್‌ 31ರಂದು 10 ಗ್ರಾಂ ಚಿನ್ನದ ಬೆಲೆಯು ₹78,950 ಇತ್ತು. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ 10 ಗ್ರಾಂಗೆ ₹20,500 ಏರಿಕೆಯಾಗಿದೆ. 

ಬೆಳ್ಳಿ ಧಾರಣೆಯು ಹೆಚ್ಚಳವಾಗಿದೆ. ಪ್ರತಿ ಕೆ.ಜಿಗೆ ₹3,500 ಏರಿಕೆಯಾಗಿದ್ದು, ₹1.02 ಲಕ್ಷ ಆಗಿದೆ. 

‘ಬುಧವಾರ ಅಕ್ಷಯ ತೃತೀಯ ಹಬ್ಬವಿದೆ‌. ಇದರಿಂದ ಆಭರಣ ತಯಾರಕರು ಮತ್ತು ದಾಸ್ತಾನುಗಾರರಿಂದ ಬೇಡಿಕೆ ಹೆಚ್ಚಳವಾಗಿದೆ. ಹಾಗಾಗಿ, ಹಳದಿ ಲೋಹದ ಬೆಲೆಯು ಏರಿಕೆಯಾಗಿದೆ’ ಎಂದು ಚಿನಿವಾರ ಪೇಟೆ ತಜ್ಞರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.