ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ದರ ₹ 464ರಷ್ಟು ಇಳಿಕೆ ಆಗಿದ್ದು ₹ 47,705ರಂತೆ ಮಾರಾಟವಾಗಿದೆ.
ಬೆಳ್ಳಿ ಧಾರಣೆ ಕೆ.ಜಿ.ಗೆ ₹ 723ರಷ್ಟು ಕಡಿಮೆ ಆಗಿದ್ದು, ₹ 70,420ರಂತೆ ಮಾರಾಟವಾಗಿದೆ.
ಅಮೆರಿಕದ ಡಾಲರ್ ಮೌಲ್ಯ ವೃದ್ಧಿ ಮತ್ತು ಈ ವಾರ ನಡೆಯಲಿರುವ ಅಮೆರಿಕದ ಫೆಡರಲ್ ರಿಸರ್ವ್ ಸಭೆಯತ್ತ ಹೂಡಿಕೆದಾರರ ಗಮನ ಹರಿದಿರುವುದರಿಂದ ಚಿನ್ನದ ದರ ಇಳಿಕೆ ಕಂಡಿತು ಎಂದು ಮೋತಿಲಾಲ್ ಓಸ್ವಾಲ್ ಹಣಕಾಸು ಸೇವೆಗಳ ಉಪಾಧ್ಯಕ್ಷ ನವ್ನೀತ್ ದಮನಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.