ADVERTISEMENT

ಲಾಕ್‌ಡೌನ್ | ಚಿನ್ನದ ಬೇಡಿಕೆ ಇಳಿಕೆ

ಪಿಟಿಐ
Published 30 ಏಪ್ರಿಲ್ 2020, 20:05 IST
Last Updated 30 ಏಪ್ರಿಲ್ 2020, 20:05 IST
-
-   

ಮುಂಬೈ: ಭಾರತದಲ್ಲಿ ಚಿನ್ನದ ಬೇಡಿಕೆಯು ಜನವರಿ–ಮಾರ್ಚ್‌ ಅವಧಿಯಲ್ಲಿ ಶೇ 36ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಚಿನ್ನ ಮಂಡಳಿಯು (ಡಬ್ಲ್ಯುಜಿಸಿ) ತಿಳಿಸಿದೆ.

ಚಿನ್ನಾಭರಣ ಮತ್ತು ಚಿನ್ನದ ಮೇಲಿನ ಹೂಡಿಕೆಯ ಬೇಡಿಕೆಯು ಮೊದಲ ತ್ರೈಮಾಸಿಕದಲ್ಲಿ ಇಳಿಕೆ ಕಂಡಿದೆ.

‘ಚಿನ್ನದ ಬೆಲೆಯು ಶೇ 25ರಷ್ಟು ಹೆಚ್ಚಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 10 ಗ್ರಾಂ ದರ ಸರಾಸರಿ ₹ 36,875ರಷ್ಟಿತ್ತು. ಕಸ್ಟಮ್ಸ್‌ ಸುಂಕ ಮತ್ತು ತೆರಿಗೆಯನ್ನು ಇದು ಒಳಗೊಂಡಿಲ್ಲ. 2019ರ ಇದೇ ಅವಧಿಯಲ್ಲಿ ₹ 29,555 ಇತ್ತು’ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಅವರು ತಿಳಿಸಿದ್ದಾರೆ.

ADVERTISEMENT

ಮದುವೆ ಸಮಾರಂಭದ ಆರಂಭದ ಬೇಡಿಕೆಯನ್ನು ಗಮನಿಸಿದರೆ ಉತ್ತಮ ಮಾರಾಟದ ನಿರೀಕ್ಷೆ ಮೂಡಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಮಾರ್ಚ್‌ನಿಂದ ಬೇಡಿಕೆ ಶೇ 41ರಷ್ಟು ಕುಸಿಯಿತು ಎಂದಿದ್ದಾರೆ.

ಚಿನ್ನದ ಮೇಲಿನ ಹೂಡಿಕೆ ಬೇಡಿಕೆಯು ಶೇ 17ರಷ್ಟು ಕಡಿಮೆಯಾಗಿದ್ದು 28.1ಟನ್‌ಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.