ADVERTISEMENT

ಚಿನ್ನದ 10ಗ್ರಾಂಗೆ ₹ 460 ಏರಿಕೆ

ಪಿಟಿಐ
Published 16 ಸೆಪ್ಟೆಂಬರ್ 2019, 13:11 IST
Last Updated 16 ಸೆಪ್ಟೆಂಬರ್ 2019, 13:11 IST
gold
gold   

ನವದೆಹಲಿ: ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಬೆಲೆ 10ಗ್ರಾಂಗೆ ₹460ರಂತೆ ಏರಿಕೆಯಾಗಿ ₹ 38,860ಕ್ಕೆ ತಲುಪಿತು.

ರೂಪಾಯಿ ಮೌಲ್ಯ ಇಳಿಕೆ ಮತ್ತು ಕಚ್ಚಾ ತೈಲ ದರದಲ್ಲಿ ಏರಿಕೆ ಆಗುತ್ತಿರುವುದರಿಂದ ಸುರಕ್ಷಿತ ಹೂಡಿಕೆಯ ಸ್ವರ್ಗವಾಗಿರುವ ಚಿನ್ನ ಖರೀದಿಗೆ ಹೂಡಿಕೆದಾರರು ಮುಗಿಬಿದ್ದರು. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಶನಿವಾರ 10 ಗ್ರಾಂ ಚಿನ್ನದ ಬೆಲೆ ₹ 38,400 ಇತ್ತು.ಬೆಳ್ಳಿ ಬೆಲೆ ಕೆ.ಜಿಗೆ ₹ 1,096ರಂತೆ ಏರಿಕೆಯಾಗಿ ₹ 47,957ಕ್ಕೆ ತಲುಪಿದೆ. ಶನಿವಾರದ ಬೆಲೆ ಕೆ.ಜಿಗೆ ₹ 46,861 ಇತ್ತು.

ADVERTISEMENT

ನ್ಯೂಯಾರ್ಕ್‌ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ಗೆ 1,504 ಡಾಲರ್‌ಗಳಂತೆ ಹಾಗೂ ಬೆಳ್ಳಿ ಒಂದು ಔನ್ಸ್‌ಗೆ 17.87 ಡಾಲರ್‌ಗಳಂತೆ ಮಾರಾಟವಾಯಿತು.ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುವಂತೆ ಮಾಡಿದೆ. ಇದರಿಂದಾಗಿ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.