ADVERTISEMENT

ಚಿನ್ನ ದುಬಾರಿ: ಮಾರ್ಚ್‌ನಿಂದ ಶೇ 25ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 6:42 IST
Last Updated 19 ಮೇ 2020, 6:42 IST
ಚಿನ್ನ
ಚಿನ್ನ    

ನವದೆಹಲಿ: ಕೋವಿಡ್‌ ದಿಗ್ಬಂಧನದಿಂದಾಗಿ ಚಿನ್ನದ ಭೌತಿಕ ಖರೀದಿಯು ಬಹುತೇಕ ಸ್ಥಗಿತಗೊಂಡಿದ್ದರೂ ಸೋಮವಾರದ ವಹಿವಾಟಿನಲ್ಲಿ ಬೆಲೆ ಪ್ರತಿ 10 ಗ್ರಾಂಗಳಿಗೆ ₹ 47,929ಕ್ಕೆ ತಲುಪಿದೆ.

ಮಾರ್ಚ್‌ನಿಂದೀಚೆಗೆ ಚಿನ್ನದ ಬೆಲೆ ಏರುಗತಿಯಲ್ಲಿಯೇ ಇದೆ. ಆಗ ₹ 38,500ರ ಆಸುಪಾಸಿನಲ್ಲಿದ್ದ ಬೆಲೆ ಈಗ ಶೇ 25ರಷ್ಟು ಏರಿಕೆ ದಾಖಲಿಸಿದೆ. ಮುಂಬೈನ ಚಿನಿವಾರ ಪೇಟೆಯಲ್ಲಿ ₹ 47,669ಕ್ಕೆ ಮಾರಾಟವಾಗಿದೆ.

ಕೋವಿಡ್‌ ಬಿಕ್ಕಟ್ಟಿನ ಜತೆಗೆ, ಅಮೆರಿಕ ಮತ್ತು ಚೀನಾದ ನಡುವಣ ವಾಣಿಜ್ಯ ಸಮರದ ಉದ್ವಿಗ್ನತೆ, ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಕಡಿತ ಮಾಡುತ್ತಿರುವುದು ಮತ್ತು ಅರ್ಥ ವ್ಯವಸ್ಥೆಗೆ ನೆರವಾಗಲು ಹಣಕಾಸು ಕೊಡುಗೆಗಳನ್ನು ಘೋಷಿಸುತ್ತಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಬೆಲೆ ದುಬಾರಿಯಾಗುತ್ತಿದೆ. ಜಾಗತಿಕ ಬೆಲೆ ಮಟ್ಟಕ್ಕೆ ಅನುಗುಣವಾಗಿ ದೇಶೀಯವಾಗಿಯೂ ಬೆಲೆ ಏರಿಕೆ ಕಾಣುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.