ಚಿನ್ನ, ಬೆಳ್ಳಿ
(ಸಾಂದರ್ಭಿಕ ಚಿತ್ರ)
ನವದೆಹಲಿ: ಪ್ರತಿ ಹತ್ತು ಗ್ರಾಂ ಚಿನ್ನದ ದರ ₹600ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಶುದ್ಧ ಬಂಗಾರವು ಪ್ರತಿ ಹತ್ತು ಗ್ರಾಂಗೆ ₹99,960ರಂತೆ ದೆಹಲಿಯಲ್ಲಿ ಶುಕ್ರವಾರ ಮಾರಾಟವಾಗಿದೆ.
ಶೇ 99.9 ಶುದ್ಧತೆಯ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ ಗುರುವಾರ ₹1,00,560 ಇತ್ತು. ಶೇ 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ ಹತ್ತು ಗ್ರಾಂಗೆ ₹550ರಷ್ಟು ಕುಸಿದಿದೆ. ಇದು ₹99,250ಕ್ಕೆ ಮಾರಾಟವಾಗಿದೆ. ಗುರುವಾರ ಇದರ ಬೆಲೆ ₹99,800ರಷ್ಟಿತ್ತು.
ಬೆಳ್ಳಿ ಬೆಲೆಯೂ ಪ್ರತಿ ಕೆ.ಜಿ.ಗೆ ₹2 ಸಾವಿರದಷ್ಟು ಕುಸಿತ ದಾಖಲಿಸಿದೆ. ಗುರುವಾರ ಪ್ರತಿ ಕೆ.ಜಿಗೆ ₹1,07,200ರಷ್ಟು ಬೆಲೆ ಇತ್ತು. ಶುಕ್ರವಾರ ಇದು ₹1,05,200ಕ್ಕೆ ಇಳಿಕೆಯಾಗಿದೆ. ಕಳೆದ ಮೂರು ವಾರಗಳಲ್ಲಿ ಬೆಳ್ಳಿಯ ಬೆಲೆ ಕುಸಿದಿದ್ದು ಇದೇ ಮೊದಲು.
ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಹಾಗೂ ರೂಪಾಯಿ ಬೆಲೆ ಕುಸಿತವೂ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.