ADVERTISEMENT

ಚಿನ್ನ, ಬೆಳ್ಳಿ ಬೆಲೆ ಇಳಿಕೆ ಸಾಧ್ಯತೆ ಇಲ್ಲ: ಮಾರುಕಟ್ಟೆ ತಜ್ಞರ ಅಂದಾಜು

ಪಿಟಿಐ
Published 25 ಜನವರಿ 2026, 16:08 IST
Last Updated 25 ಜನವರಿ 2026, 16:08 IST
   

ನವದೆಹಲಿ: ಚಿನ್ನ ಮತ್ತು ಬೆಳ್ಳಿಯ ದರವು ಈ ವಾರದ ವಹಿವಾಟಿನಲ್ಲಿ ಕಡಿಮೆ ಆಗುವ ಸಾಧ್ಯತೆಯಂತೂ ಇದ್ದಂತಿಲ್ಲ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ವರ್ತಕರು ಹಾಗೂ ಹೂಡಿಕೆದಾರರ ಗಮನವು ಕೇಂದ್ರ ಬಜೆಟ್‌ ಕಡೆ ಇರಲಿದೆ. ಬಜೆಟ್‌ನಲ್ಲಿ ಘೋಷಣೆಯಾಗುವ ಅಂಶಗಳು ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

‘ಚಿನ್ನ ಹಾಗೂ ಬೆಳ್ಳಿ ದರವು ಏರುಗತಿಯಲ್ಲಿ ಇರಲಿವೆ. ಯಾವುದಾದರೂ ಸಂದರ್ಭದಲ್ಲಿ ಅವುಗಳ ಬೆಲೆಯು ತುಸು ಕಡಿಮೆ ಆದರೆ ಅದನ್ನು ಹೊಸದಾಗಿ ಹೂಡಿಕೆಗೆ ಅವಕಾಶ ಎಂದು ಭಾವಿಸಬೇಕು’ ಎಂದು ಜೆಎಂ ಫೈನಾನ್ಶಿಯಲ್‌ ಸರ್ವಿಸಸ್‌ನ ಪ್ರಣವ್ ಮೆರ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.