ADVERTISEMENT

ಪಿಎಲ್‌ಐ: ಟಾಟಾ, ಮಹೀಂದ್ರಗೆ ಕೇಂದ್ರ ಸರ್ಕಾರ ₹246 ಕೋಟಿ ಪಾವತಿ

ಪಿಟಿಐ
Published 2 ಜನವರಿ 2025, 15:42 IST
Last Updated 2 ಜನವರಿ 2025, 15:42 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ನವದೆಹಲಿ: ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಟಾಟಾ ಮೋಟರ್ಸ್‌ಗೆ ಉತ್ಪಾದನೆ ಆಧರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ₹246 ಕೋಟಿ ಪಾವತಿಗೆ ಕೇಂದ್ರ ಭಾರಿ ಕೈಗಾರಿಕೆ ಸಚಿವಾಲಯವು ಗುರುವಾರ ಅನುಮೋದನೆ ನೀಡಿದೆ.

‘ಪಿಎಲ್‌ಐ ಯೋಜನೆಯಡಿ ಕಂಪನಿಗಳು ಸ್ಥಳೀಯವಾಗಿ ಒರಿಜಿನಲ್‌ ಇಕ್ವಿಪ್‌ಮೆಂಟ್‌ ಮ್ಯಾನುಫ್ಯಾಕ್ಚರರ್ಸ್‌ (ಒಇಎಂ) ಸಾಮಗ್ರಿಗಳನ್ನು ತಯಾರಿಸಿದ್ದು, ತೃಪ್ತಿಕರವಾಗಿದೆ’ ಎಂದು ಕೇಂದ್ರ ಭಾರಿ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಟಾಟಾ ಮೋಟರ್ಸ್‌ಗೆ ಸುಮಾರು ₹142 ಕೋಟಿ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರಗೆ ₹104 ಕೋಟಿ ಪಿಎಲ್‌ಐ ಅಡಿ ಹಣ ಪಾವತಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.