ADVERTISEMENT

ಲೆಕ್ಕಪರಿಶೋಧಿತ ವರದಿ ಸಲ್ಲಿಕೆ ಗಡುವು ವಿಸ್ತರಣೆ

ಪಿಟಿಐ
Published 2 ಅಕ್ಟೋಬರ್ 2022, 5:53 IST
Last Updated 2 ಅಕ್ಟೋಬರ್ 2022, 5:53 IST

ನವದೆಹಲಿ: ಆದಾಯ ತೆರಿಗೆ ಇಲಾಖೆಯು 2021–22ನೇ ಹಣಕಾಸು ವರ್ಷಕ್ಕೆ ಲೆಕ್ಕ ಪರಿಶೋಧಿತ (ಆಡಿಟೆಡ್‌) ವರದಿ ಸಲ್ಲಿಸಲು ನೀಡಿದ್ದ ಗಡುವನ್ನು ಅಕ್ಟೋಬರ್‌ 7ರವರೆಗೆ ವಿಸ್ತರಣೆ ಮಾಡಿದೆ.

ಈ ಹಿಂದಿನ ಆದೇಶದ ಪ್ರಕಾರ, ಸೆಪ್ಟೆಂಬರ್‌ 30ಕ್ಕೆ ಗಡುವು ಮುಕ್ತಾಯ ಆಗಬೇಕಿತ್ತು. ಲೆಕ್ಕಪರಿಶೋಧನೆಗೆ ಸಂಬಂಧಿಸಿದ ವಿವಿಧ ವರದಿಗಳನ್ನು ಸಲ್ಲಿಸಲು ತೆರಿಗೆ ಪಾವತಿದಾರರು ಮತ್ತು ಲೆಕ್ಕ ಪರಿಶೋಧಕಕರಿಗೆ ಕಷ್ಟವಾಗುತ್ತಿದೆ ಎನ್ನುವುದನ್ನು ಪರಿಗಣಿಸಿ ಗಡುವು ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT