ADVERTISEMENT

5 ವರ್ಷದ ಆರ್‌.ಡಿ. ಬಡ್ಡಿದರ ಹೆಚ್ಚಳ

ಪಿಟಿಐ
Published 29 ಸೆಪ್ಟೆಂಬರ್ 2023, 16:15 IST
Last Updated 29 ಸೆಪ್ಟೆಂಬರ್ 2023, 16:15 IST
<div class="paragraphs"><p>ಸಾಂದರ್ಭಿಕ ಚಿತ್ರ</p><p></p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರವು ಐದು ವರ್ಷಗಳ ನಿಶ್ಚಿತ ಠೇವಣಿ (ಆರ್‌.ಡಿ) ಮೇಲಿನ ಬಡ್ಡಿದರವನ್ನು ಡಿಸೆಂಬರ್‌ ತ್ರೈಮಾಸಿಕಕ್ಕೆ ಶೇ 6.5 ರಿಂದ ಶೇ 6.7ಕ್ಕೆ ಹೆಚ್ಚಳ ಮಾಡಿದೆ. ಆದರೆ, ಇತರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ADVERTISEMENT

ಕೇಂದ್ರ ಹಣಕಾಸು ಸಚಿವಾಲಯವು ಹೊರಡಿಸಿರುವ ಪ್ರಕಟಣೆಯಂತೆ, ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 4 ಮತ್ತು ಒಂದು ವರ್ಷ ಅವಧಿ ಠೇವಣಿಯ ಬಡ್ಡಿದರವನ್ನು ಶೇ 6.9ರಷ್ಟರಲ್ಲೇ ಉಳಿಸಿಕೊಳ್ಳಲಾಗಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿಯೂ ಇದೇ ಪ್ರಮಾಣದ ಬಡ್ಡಿದರ ಇತ್ತು.

ಎರಡು ಮತ್ತು ಮೂರು ವರ್ಷಗಳ ಅವಧಿ ಠೇವಣಿಗಳ ಮೇಲಿನ ಬಡ್ಡಿದರವು ಶೇ 5ರಷ್ಟು ಮತ್ತು ಐದು ವರ್ಷಗಳ ಅವಧಿ ಠೇವಣಿ ಬಡ್ಡಿದರವು ಶೇ 7.5ರಷ್ಟೇ ಮುಂದುವರಿಯಲಿದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರದಲ್ಲಿಯೂ (ಶೇ 8.2) ಬದಲಾವಣೆ ಆಗಿಲ್ಲ. ರಾಷ್ಟ್ಋಈಯ ಉಳಿತಾಯ ಪ್ರಮಾಣಪತ್ರ (ಶೇ 7.7) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌) ಯೋಜನೆಯ ಬಡ್ಡಿದರದಲ್ಲಿಯೂ (ಶೇ 7.1) ಬದಲಾವಣೆ ಮಾಡಿಲ್ಲ.

ಕಿಸಾನ್ ವಿಕಾಸ ಪ್ರಮಾಣ ಪತ್ರ (ಶೇ 7.5) ಮತ್ತು ಸಕನ್ಯಾ ಸಮೃದ್ಧಿ ಯೋಜನೆಯ (ಶೇ 8) ಬಡ್ಡಿದರವೂ ಬದಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.