ADVERTISEMENT

ಐಡಿಬಿಐ ಬ್ಯಾಂಕ್‌ ಮಾರಾಟಕ್ಕೆ ಬಿಡ್‌ ಆಹ್ವಾನ

ಪಿಟಿಐ
Published 7 ಅಕ್ಟೋಬರ್ 2022, 12:39 IST
Last Updated 7 ಅಕ್ಟೋಬರ್ 2022, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಐಡಿಬಿಐ ಬ್ಯಾಂಕ್‌ನ ಶೇ 60.72ರಷ್ಟು ಷೇರುಗಳನ್ನು ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರವು ಶುಕ್ರವಾರ ಬಿಡ್‌ ಆಹ್ವಾನಿಸಿದೆ. ಖರೀದಿ ಆಸಕ್ತಿ ತಿಳಿಸಲು ಹೂಡಿಕೆದಾರರಿಗೆ ಡಿಸೆಂಬರ್‌ 16ರವರೆಗೆ ಅವಕಾಶ ನೀಡಲಾಗಿದೆ.

ಐಡಿಬಿಐ ಬ್ಯಾಂಕ್‌ನಲ್ಲಿ ಎಲ್‌ಐಸಿ ಶೇ 49.24ರಷ್ಟು ಷೇರುಪಾಲು ಹೊಂದಿದ್ದು, ಅದರಲ್ಲಿ ಶೇ 30.24ರಷ್ಟನ್ನು ಮಾರಾಟ ಮಾಡಲಿದೆ. ಕೇಂದ್ರ ಸರ್ಕಾರವು ಬ್ಯಾಂಕ್‌ನಲ್ಲಿ ಶೇ 45.48ರಷ್ಟು ಷೇರುಪಾಲು ಹೊಂದಿದ್ದು, ಅದರಲ್ಲಿ ಶೇ 30.48ರಷ್ಟನ್ನು ಮಾರಾಟ ಮಾಡಲಿದೆ. ಐಡಿಬಿಐ ಬ್ಯಾಂಕ್‌ನ ಆಡಳಿತದ ನಿಯಂತ್ರದ ಜೊತೆಗೆ ಒಟ್ಟಾರೆ ಶೇ 60.72 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ತಿಳಿಸಿದೆ.

ಬಿಎಸ್‌ಇನಲ್ಲಿ ಐಡಿಬಿಐ ಬ್ಯಾಂಕ್‌ನ ಷೇರು ಮೌಲ್ಯವು ಶುಕ್ರವಾರ ಶೇ 0.71ರಷ್ಟು ಹೆಚ್ಚಾಗಿ ₹42.70ಕ್ಕೆ ತಲುಪಿತು. ಸದ್ಯದ ಮಾರುಕಟ್ಟೆ ದರದ ಪ್ರಕಾರ, ಶೇ 60.72 ರಷ್ಟು ಷೇರುಗಳ ಮೌಲ್ಯವು ₹27,800 ಕೋಟಿ ಆಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.