ADVERTISEMENT

ಸಣ್ಣ ಉಳಿತಾಯ: ಬಡ್ಡಿ ದರ ಯಥಾಸ್ಥಿತಿ

ಪಿಟಿಐ
Published 30 ಜೂನ್ 2025, 14:29 IST
Last Updated 30 ಜೂನ್ 2025, 14:29 IST
   

ನವದೆಹಲಿ: ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ಹಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಜುಲೈ 1ರಿಂದ ಆರಂಭವಾಗುವ ತ್ರೈಮಾಸಿಕದಲ್ಲಿ ಬದಲಾವಣೆ ಮಾಡದೆ ಇರಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿದೆ.

ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕವನ್ನೂ ಪರಿಗಣನೆಗೆ ತೆಗೆದುಕೊಂಡರೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಸತತ ಆರು ತ್ರೈಮಾಸಿಕಗಳವರೆಗೆ ಸ್ಥಿರವಾಗಿ ಇದ್ದಂತೆ ಆಗಲಿದೆ.

ಏಪ್ರಿಲ್–ಜೂನ್‌ ತ್ರೈಮಾಸಿಕದಲ್ಲಿ ಅನ್ವಯವಾದ ಬಡ್ಡಿ ದರಗಳೇ ಮುಂದುವರಿಯಲಿವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಪರಿಷ್ಕರಣೆ ಆಗಬೇಕೇ ಎಂಬ ಬಗ್ಗೆ ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ತೀರ್ಮಾನ ತೆಗೆದುಕೊಳ್ಳುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.