ADVERTISEMENT

ಪಿಎಫ್‌ಗೆ ಶೇ 8.25 ಬಡ್ಡಿದರ: ಕೇಂದ್ರದ ಒಪ್ಪಿಗೆ

ಪಿಟಿಐ
Published 24 ಮೇ 2025, 13:44 IST
Last Updated 24 ಮೇ 2025, 13:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಆರ್ಥಿಕ ಸಾಲಿನಡಿ ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ ಶೇ 8.25ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 7 ಕೋಟಿಗೂ ಹೆಚ್ಚು ಇರುವ ಚಂದಾದಾರರ ಖಾತೆಗಳಿಗೆ ಈ ಬಡ್ಡಿ ಮೊತ್ತವನ್ನು ಜಮೆ ಮಾಡಲಿದೆ. 

ಫೆಬ್ರುವರಿ ಅಂತ್ಯದಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಧರ್ಮದರ್ಶಿ ಮಂಡಳಿ  (ಸಿಬಿಟಿ) ಸಭೆಯು 2024–25ನೇ ಸಾಲಿಗೆ ಇಷ್ಟು ಮೊತ್ತದ ಬಡ್ಡಿ ಪಾವತಿಸಲು ಒಪ್ಪಿಗೆ ನೀಡಿ, ಅನುಮೋದನೆಗಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಇದಕ್ಕೆ ಸಮ್ಮತಿ ದೊರೆತಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.