ADVERTISEMENT

GST Collection: ₹1.96 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ಪಿಟಿಐ
Published 1 ಫೆಬ್ರುವರಿ 2025, 15:35 IST
Last Updated 1 ಫೆಬ್ರುವರಿ 2025, 15:35 IST
<div class="paragraphs"><p>ಜಿಎಸ್‌ಟಿ </p></div>

ಜಿಎಸ್‌ಟಿ

   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಮೂಲಕ ಜನವರಿಯಲ್ಲಿ ₹1.96 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ. ದೇಶೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳು ಸದೃಢಗೊಂಡಿದೆ. ಇದರಿಂದ ವರಮಾನ ಸಂಗ್ರಹದಲ್ಲಿ ಶೇ 12.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ದೇಶೀಯ ವಹಿವಾಟು ಮೇಲಿನ ಜಿಎಸ್‌ಟಿ ಸಂಗ್ರಹದಲ್ಲಿ ಶೇ 10.4ರಷ್ಟು ಏರಿಕೆಯಾಗಿದ್ದು, ಒಟ್ಟು ₹1.47 ಲಕ್ಷ ಕೋಟಿ ಸಂಗ್ರಹವಾಗಿದೆ. ಆಮದು ಸರಕುಗಳ ಮೇಲಿನ ಸಂಗ್ರಹದಲ್ಲಿ ಶೇ 19.8ರಷ್ಟು ಏರಿಕೆಯಾಗಿದ್ದು, ₹48,382 ಕೋಟಿ ಸಂಗ್ರಹವಾಗಿದೆ.

ADVERTISEMENT

ಜನವರಿಯಲ್ಲಿ ಒಟ್ಟು ₹23,853 ಕೋಟಿ ಮರು‍‍‍ಪಾವತಿ ಮಾಡಲಾಗಿದೆ. ಮರು‍‍‍ಪಾವತಿ ಬಳಿಕ ಒಟ್ಟು ವರಮಾನ ಸಂಗ್ರಹ ₹1.72 ಲಕ್ಷ ಕೋಟಿ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.