ADVERTISEMENT

ಜಿಎಸ್‌ಟಿ ದಾಖಲೆ ಪರಿಶೀಲನೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 19:08 IST
Last Updated 12 ಮಾರ್ಚ್ 2019, 19:08 IST
   

ನವದೆಹಲಿ: ಜಿಎಸ್‌ಟಿನಲ್ಲಿ ನೋಂದಣಿ ಮಾಡಿಕೊಂಡಿರುವವರು ಜಿಎಸ್‌ಟಿಆರ್‌1 ಮತ್ತು ಜಿಎಸ್‌ಟಿಆರ್‌–3ಬಿನಲ್ಲಿ ಘೋಷಿತ ತೆರಿಗೆ ಹೊಣೆಗಾರಿಕೆ ಮತ್ತು ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಪರಿಶೀಲನೆ ಮಾಡಿಕೊಳ್ಳಬಹುದು ಎಂದು ಜಿಎಸ್‌ಟಿಎನ್‌ ತಿಳಿಸಿದೆ.

ಸರಕು ಮತ್ತು ಸೇವೆಗಳ ಮಾರಾಟದ ಅಂತಿಮ ರಿಟರ್ನ್ಸ್‌ನಲ್ಲಿ (ಜಿಎಸ್‌ಟಿಆರ್‌–1) ತೆರಿಗೆ ಹೊಣೆಗಾರಿಕೆಯ ಮಾಹಿತಿಗಳನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವಿದೆ.

ಮಾರಾಟದ ಸಂಕ್ಷಿಪ್ತ ರಿಟರ್ನ್ಸ್‌ನಲ್ಲಿ (ಜಿಎಸ್‌ಟಿಆರ್‌–3ಬಿ) ಘೋಷಿತ ಮತ್ತು ಪಾವತಿಸಿದ ತೆರಿಗೆಯ ಮಾಹಿತಿ ಪಡೆಯಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.