ADVERTISEMENT

ರಫ್ತು ಸೂಚ್ಯಂಕದಲ್ಲಿ ಗುಜರಾತ್‌ಗೆ ಮೊದಲ ಸ್ಥಾನ

ಪಿಟಿಐ
Published 25 ಮಾರ್ಚ್ 2022, 16:19 IST
Last Updated 25 ಮಾರ್ಚ್ 2022, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನೀತಿ ಆಯೋಗ ಸಿದ್ಧಪಡಿಸಿರುವ ರಫ್ತು ಸಿದ್ಧತೆ ಸೂಚ್ಯಂಕ – 2021ರಲ್ಲಿ ಗುಜರಾತ್ ರಾಜ್ಯವು ಮೊದಲ ಸ್ಥಾನದಲ್ಲಿದೆ. ಹಿಂದಿನ ವರ್ಷವೂ ಗುಜರಾತ್ ಮೊದಲ ಸ್ಥಾನದಲ್ಲಿ ಇತ್ತು.

ಮಹಾರಾಷ್ಟ್ರ ಮತ್ತು ಕರ್ನಾಟಕ ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನಗಳಲ್ಲಿ ಇವೆ. ರಾಜ್ಯಗಳ ರಫ್ತು ಸಾಮರ್ಥ್ಯ ಮತ್ತು ಸಾಧನೆಯನ್ನು ಗಮನಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ ಎಂದು ನೀತಿ ಆಯೋಗ ಹೇಳಿದೆ.

ಒಟ್ಟು ರಫ್ತಿನಲ್ಲಿ ಶೇಕಡ 70ರಷ್ಟು ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಿಂದ ಆಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.