ನವದೆಹಲಿ: ದೇಶದ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್) ಮಂಗಳವಾರ ₹15 ಲಕ್ಷ ಕೋಟಿ ದಾಟಿದೆ.
ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಬ್ಯಾಂಕ್‌ನ ಪ್ರತಿ ಷೇರಿನ ಮೌಲ್ಯ ಕ್ರಮವಾಗಿ ಶೇ 1.78ರಷ್ಟು ಮತ್ತು ಶೇ 1.70ರಷ್ಟು ಹೆಚ್ಚಳವಾಗಿದೆ. ಷೇರಿನ ಬೆಲೆಯು ಕ್ರಮವಾಗಿ ₹1,961 ಮತ್ತು ₹1,960 ಆಗಿದೆ.
ಏಪ್ರಿಲ್ 9ರಿಂದ ಬ್ಯಾಂಕ್‌ನ ಷೇರಿನ ಬೆಲೆಯಲ್ಲಿ ಶೇ 11ರಷ್ಟು ಏರಿಕೆಯಾಗಿದ್ದು, ಮಾರುಕಟ್ಟೆ ಮೌಲ್ಯಕ್ಕೆ ₹1.50 ಲಕ್ಷ ಕೋಟಿ ಸೇರ್ಪಡೆಯಾಗಿದೆ. ಒಟ್ಟು ಎಂ–ಕ್ಯಾಪ್ ₹15.01 ಲಕ್ಷ ಕೋಟಿಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ₹17.46 ಲಕ್ಷ ಕೋಟಿಯಾಗಿದ್ದರೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಎಂ–ಕ್ಯಾಪ್ ₹12 ಲಕ್ಷ ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.