ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌, ಮ್ಯಾಕ್ಸ್‌ ಬುಪಾ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 1 ಮೇ 2019, 6:08 IST
Last Updated 1 ಮೇ 2019, 6:08 IST
   

ಬೆಂಗಳೂರು: ಸಮಗ್ರ ಆರೋಗ್ಯ ವಿಮೆ ಸೇವೆ ಒದಗಿಸಲು ಮ್ಯಾಕ್ಸ್ ಬುಪಾ ಮತ್ತು ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಒಪ್ಪಂದ ಮಾಡಿಕೊಂಡಿವೆ.

ಬ್ಯಾಂಕ್‌ನ ಗ್ರಾಹಕರು ಪಾಲಿಸಿ ಖರೀದಿಗೆ ಸ್ವಯಂಚಾಲಿತ ವ್ಯವಸ್ಥೆಯಾಗಿರುವ ಎನಿಟೈಮ್ ಹೆಲ್ತ್ (ಎಟಿಹೆಚ್), ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ತಕ್ಷಣದ ವಿಮೆ ಸೇವೆ ಪಡೆಯಲು ಮ್ಯಾಕ್ಸ್ ಬುಪಾ ನೆರವಾಗಲಿದೆ. ಒಪ್ಪಂದದ ಫಲವಾಗಿ ಗ್ರಾಹಕರು ಕೆಲವೇ ನಿಮಿಷಗಳಲ್ಲಿ ಡಿಜಿಟಲ್‌ ನೆರವಿನಿಂದ ಆರೋಗ್ಯ ವಿಮೆ ಪಡೆಯಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT