ನವದೆಹಲಿ: ವಿದ್ಯುತ್ ಚಾಲಿತ ವಾಹನ ವಿಭಾಗಕ್ಕೆ ಸಂಬಂಧಿಸಿದಂತೆ ಹೀರೊ ಎಲೆಕ್ಟ್ರಿಕ್ ಮತ್ತು ಮಹೀಂದ್ರ ಸಮೂಹ ಒಪ್ಪಂದ ಮಾಡಿಕೊಂಡಿವೆ.
ಈ ಒಪ್ಪಂದದ ಪ್ರಕಾರ, ಹೀರೊ ಎಲೆಕ್ಟ್ರಿಕ್‌ನ ಅತ್ಯಂತ ಜನಪ್ರಿಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಾದ ಆಪ್ಟಿಮಾ ಮತ್ತು ಎನ್‌ವೈಎಕ್ಸ್‌ಅನ್ನುಮಹೀಂದ್ರ ಸಮೂಹವು ಪೀತಮಪುರದಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಲಿದೆ. ಈ ಕುರಿತು ಎರಡೂ ಕಂಪನಿಗಳು ಜಂಟಿ ಹೇಳಿಕೆ ನೀಡಿವೆ.
ಈ ಸಹಭಾಗಿತ್ವದಿಂದ ಹೀರೊ ಎಲೆಕ್ಟ್ರಿಕ್‌ನ ಲುಧಿಯಾನದಲ್ಲಿ ಇರುವ ಘಟಕದ ವಿಸ್ತರಣೆ ಅನುಕೂಲ ಆಗಲಿದೆ. ಅಲ್ಲದೆ, 2022ರ ಒಳಗಾಗಿ ಪ್ರತಿ ವರ್ಷ 10 ಲಕ್ಷ ವಾಹನಗಳ ತಯಾರಿಕೆ ಮಾಡಲು ಸಹ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.